ಕರ್ನಾಟಕ

ಬಂಡೀಪುರದಲ್ಲಿ ಅಗ್ನಿ ಅವಘಡ; ನೂರಾರು ಎಕರೆ ಅರಣ್ಯ ನಾಶ!

Pinterest LinkedIn Tumblr


ಮೈಸೂರು: ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಉದ್ಯಾನದಲ್ಲಿ ಹೊತ್ತಿ ಉರಿದ ಬೆಂಕಿಗೆ ಇಡೀ ಅರಣ್ಯದ ಸಂಪತ್ತು ತುಂಬಾ ಪ್ರಮಾಣದಲ್ಲಿ ಭಸ್ಮವಾಗಿದೆ. ಇನ್ನು ಬೆಂಕಿ ನಂದಿಸಲು ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿಗಳು ಕಸರತ್ತು ನಡೆಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆಯಷ್ಟು ಅರಣ್ಯ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯದ ಪ್ರಾಣಿ ಮತ್ತು ಪಕ್ಷಗಳು ಬಲಿಯಾಗಿವೆ. ಇದೀಗ ಊಟಿ-ಗುಂಡ್ಲುಪೇಟೆ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುತ್ತಿದ್ಧಾರೆ.

ಈ ಕಿಡಿಗೇಡಿಗಳ ಕೃತ್ಯಕ್ಕೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ. ಇಡೀ ಅರಣ್ಯವೇ ಭಸ್ಮವಾಗಿದ್ದು, ಪ್ರಾಣ ಮತ್ತು ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ಇನ್ನ ಬಂಡಿಪುರದ ಗೋಪಾಲಸ್ವಾಮಿ ಬೀಟ್‍ನಲ್ಲಿ ಬೆಂಕಿ ಆರಿಸಲು ಭಾರೀ ಕಸರತ್ತು ಮಾಡಲಾಗಿದೆ. ಇಡೀ ಕಾಡಿಗೆ ಬೆಂಕಿ ಬಿದ್ದ ಕಾರಣಕ್ಕೆ ಅಗ್ನಿಯನ್ನು ಆರಿಸಲಾಗದೇ ಧಗ ಧಗ ಉರಿಯುತ್ತಿದೆ. ಅಲ್ಲದೇ ಭಾರೀ ಜೋರಾಗಿ ಗಾಳಿ ಬೀಸುತ್ತಿದ್ದುದರಿಂದ ಬೆಂಕಿ ಬೇಗ ಹರಡಿದೆ. ಈ ಪ್ರದೇಶವು ಕುರುಚಲು ಕಾಡಾಗಿದ್ದು, ಹುಲ್ಲು ಮತ್ತು ಲಂಟಾನ ಗಿಡಗಳನ್ನು ಹೊಂದಿದೆ ಎನ್ನಲಾಗಿದೆ.

ಇನ್ನು ಬೆಂಕಿ ರೌದ್ರ ನರ್ತನಕ್ಕೆ ಸಾವಿರಾರು ಎಕರೆ ಅರಣ್ಯ ಉರಿದು ಭಸ್ಮ ವಾಗಿದೆ. ಜತೆಗೆ ಕಾಡಿನಲ್ಲಿದ್ದ ಸುಮಾರು ವನ್ಯಮೃಗಗಳು ಬೆಂಕಿಗೆ ಬಲಿಯಾಗಿವೆ. ಅಲ್ಲಿಯೇ ನೆರೆದಿದ್ದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಹರಸಾಹಸ ಮಾಡುತ್ತಿದ್ದಾರೆ.

Comments are closed.