ರಾಷ್ಟ್ರೀಯ

ದೆಹಲಿಗೆ ಸಂಪೂರ್ಣ ರಾಜ್ಯತ್ವ ನೀಡಬೇಕೆಂದು ಕೇಂದ್ರಕ್ಕೆ ಆಗ್ರಹ : ಕೇಜ್ರಿವಾಲ್ ಉಪವಾಸ ಸತ್ಯಾಗ್ರಹ!

Pinterest LinkedIn Tumblr


ನವದೆಹಲಿ: ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಸಿಎಂ ಅರವಿಂದ್​​ ಕೇಜ್ರಿವಾಲ್​​​ ಕೇಂದ್ರದ ವಿರುದ್ಧ ಹೋರಾಟಕ್ಕೆ ಸಿದ್ದರಾಗಿದ್ದಾರೆ. ಇದೇ ಮುಂದಿನ ತಿಂಗಳು ಮಾರ್ಚ್.​1 ರಿಂದಲೇ​ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಿಎಂ ಕೇಜ್ರಿವಾಲ್​​ ಘೋಷಿಸಿದ್ದಾರೆ. ಅಲ್ಲದೇ ಈಗಾಗಲೇ ಹೋರಾಟಕ್ಕೆ ಭಾರೀ ಸಿದ್ದತೆ ನಡೆಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಮುನ್ನೆಚ್ಚರಿಕಾ ಸಂದೇಶ ರವಾನಿಸಿದ್ದಾರೆ.

ಇನ್ನು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದೇವೆ. ದೆಹಲಿಗೆ ಕೇಂದ್ರ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವವರೆಗೂ ಹೋರಾಟ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಈ ಬಾರಿ ನಮ್ಮ ಉಪವಾಸ ಸತ್ಯಾಗ್ರಹ ನಿಲ್ಲಿಸುವುದೇ ಇಲ್ಲ. ಈ ವಿಚಾರದಲ್ಲಿ ಹೋರಾಟಕ್ಕೂ ಸಿದ್ದ. ಹಾಗೆಯೇ ಸಾವನ್ನು ಎದುಸಿಲು ಸಿದ್ದ ಎಂದು ಸಿಎಂ ಕೇಜ್ರಿವಾಲ್​​ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ದೆಹಲಿಯನ್ನು ಸಂಪೂರ್ಣ ರಾಜ್ಯ ಎಂದು ಘೋಷಿಸಬೇಕು. ಸದ್ಯಕ್ಕೆ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಹೋರಾಟವೊಂದೇ ದಾರಿ. ನಾವು ತಳಮಟ್ಟದಲ್ಲಿ ಸಂಘಟನೆ ಕಟ್ಟುವ ಮೂಲಕ ಕೇಂದ್ರಕ್ಕೆ ಮೇಲೆ ಒತ್ತಡ ತರಲಿದ್ದೇವೆ. ಸಂಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ ಬೀದಿಗಿಳಿಯಲೇ ಬೇಕು. ನಮಗೆ ಬೇರೆ ಯಾವುದೇ ದಾರಿಯಿಲ್ಲ. ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಬೇಕಿದೆ ಎಂದರು.

ಹಾಗೆಯೇ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆಪ್​​ ಪಕ್ಷಕ್ಕೆ ಮತಹಾಕಿ ಗೆಲ್ಲಿಸಬೇಕು. ನಾವು ದೆಹಲಿಯಲ್ಲಿ 7 ಕ್ಷೇತ್ರಗಳಲ್ಲಿ ಗೆದ್ದರೇ ಖಂಡಿತಾ ಸಂಪೂರ್ಣ ರಾಜ್ಯದ ಸ್ಥಾನಮಾನ ತರಲಿದ್ದೇವೆ. ನಮ್ಮನ್ನು ಗೆಲ್ಲಿಸಿ ಸಂಸತ್​​ಗೆ ಕಳಿಸಿಕೊಡಿ. ನಿಮಗೆ ಯಾವುದೇ ಸಮಸ್ಯೆ ಬಾರದಂತೇ ನೋಡಿಕೊಳ್ಳುತ್ತೇವೆ. ನಮ್ಮ ಹೋರಾಟಕ್ಕೆ ನೀವು ಕೈಜೋಡಿಸಿ ಎಂದು ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಹೇಳಿದ್ದಾರೆ.

ದೆಹಲಿಯ ಸಂಪೂರ್ಣ ರಾಜ್ಯತ್ವಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಲಯದ ಮೆಟ್ಟಿಲು ಏರಲಾಯಿತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ದೆಹಲಿ ನಾಗರಿಕರ ಅಭಿಪ್ರಾಯ ಸಂಗ್ರಹಿಸಲು ಫೆ. 24ರಿಂದ ಸಾಮೂಹಿಕ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ಮತ್ತೋರ್ವ ಆಪ್​​ ನಾಯಕ ತಿಳಿಸಿದ್ದಾರೆ.

Comments are closed.