ಕರ್ನಾಟಕ

ಯೋಧನ ಕುಟುಂಬದ ನೋವು ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ: ಸುಮಲತಾ ಅಂಬರೀಶ್

Pinterest LinkedIn Tumblr


ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಯೋಧ ಗುರು ಮನೆಗೆ ನಟಿ ಸುಮಲತಾ ಅಂಬರೀಶ್ ಅವರು ಇಂದು ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಕುಟುಂಬ ನೋವು ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಒಬ್ಬರನ್ನು ಕಳೆದುಕೊಂಡಿರುವ ನೋವನ್ನು ಮಾತಿನಲ್ಲೇ ತುಂಬಿಸಲು ಸಾಧ್ಯವಿಲ್ಲ. ಆದ್ರೂ ನಿಮ್ಮ ನೋವಿನಲ್ಲಿ ನಾವು ಮಾತ್ರ ಅಲ್ಲ ಇಡೀ ದೇಶವೇ ಜೊತೆ ಇದೆ. ದೇಶದ ಜನ ನಿಂತು ನಿಮಗೆ ಸೆಲ್ಯೂಟ್ ಹೊಡೆಯುತ್ತೇವೆ. ನಿಮ್ಮನ್ನು ಪ್ರೀತಿಸುತ್ತಾ ಇದೆ. ನಿಮ್ಮ ಮಗನಿಂದ ದೊಡ್ಡ ಗೌರವ ನಿಮಗೆಲ್ಲರಿಗೂ ಸಿಕ್ಕಿದೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದ್ದಾರೆ.

ನಮ್ಮ ನೋವನ್ನು ಇನ್ನೊಬ್ಬರಿಗೆ ಹೇಳಿದ್ರೆ ಅರ್ಥವಾಗಲ್ಲ. ಅದನ್ನು ಅನುಭವಿಸಿದವರಿಗೆ ಆ ನೋವು ಏನೆಂಬುದು ತಿಳಿಯುತ್ತದೆ. ಗುರು ಪತ್ನಿ ತುಂಬಾ ಚಿಕ್ಕ ಹುಡುಗಿ. ಅವಳಿಗೆ ಜೀವನದಲ್ಲಿ ಇನ್ನೂ ತುಂಬಾನೇ ಧೈರ್ಯ ತುಂಬಬೇಕಿದೆ. ಈಗಾಗಲೇ ತುಂಬಾ ಜನ ಅವರ ಪರವಾಗಿ ನಿಂತಿದ್ದಾರೆ. ಜೊತೆಗೆ ನಾವು ಒಂದು ಸಣ್ಣ ಸೇವೆಯನ್ನು ಮಾಡಿದ್ದೇವೆ ಅಂದ್ರು.

ಜಮೀನು ಹಸ್ತಾಂತರದ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಇದು ನಮ್ಮ ಕರ್ತವ್ಯ ಅಂತ ಹೇಳಿದ್ದೇನೆ. ನಾವು ಮಾಡಬೇಕಾಗಿರೋ ಕನಿಷ್ಟ ಧರ್ಮ ಇದಾಗಿದೆ. ಒಪ್ಪಿಕೊಂಡರೆ ನಮ್ಮ ಪುಣ್ಯ. ಇದರಿಂದ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ, ತೃಪ್ತಿ ಸಿಗುತ್ತದೆ ಎಂದು ಹೇಳಿದೆ. ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಂದಿನ ಪ್ರಕ್ರಿಯೆ ಆರಂಭಿಸುವುದಾಗಿ ಅವರು ಹೇಳಿದ್ರು.

ಇಂದು ಜಿಲ್ಲೆಯ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ಬಸವನ ಆಶೀರ್ವಾದ ಪಡೆದು, ಕಾಣಿಕೆ ಸಲ್ಲಿಸಿದ ಬಳಿಕ ಅವರು ಗುರು ಮನೆಗೆ ತೆರಳಿ ಸಾಂತ್ವನ ತಿಳಿಸಿದ್ದಾರೆ.

ಫೆ.14ರಂದು ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಅದಿಲ್ ದರ್ ಎಂಬ ಉಗ್ರ ಸ್ಕಾರ್ಪಿಯೋ ಕಾರಿನಲ್ಲಿ ಸ್ಫೋಟಕ ತುಂಬಿ ಆತ್ಮಾಹುತಿ ದಾಳಿ ಮಾಡಿದ್ದನು. ಈ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ.

Comments are closed.