ಕರ್ನಾಟಕ

ಕಾಂಗ್ರೆಸ್​ ನಾಯಕರಿಗೆ ತಿರುಗೇಟು ನೀಡಿದ ಅನಂತಕುಮಾರ್​ ಹೆಗಡೆ

Pinterest LinkedIn Tumblr


ಶಿರಸಿ: ಸಿದ್ದರಾಮಯ್ಯನವರ ಆತ್ಮವಿಶ್ವಾಸಕ್ಕೆ ನಾನು ತಲೆ ಬಾಗುತ್ತೇನೆ. ಅವರಿಗೆ ಪ್ರಧಾನ ಮಂತ್ರಿ ಆಗುವುದಿಲ್ಲ ಎಂಬುದು ಸ್ಪಷ್ಟ ಆಗಿದೆ. ನನ್ನ ಜೈಲಿಗೆ ಹಾಕಲು ಆಗಲ್ಲ ಎನ್ನುವುದು ಸಿದ್ದರಾಮಯ್ಯನಿಗೆ ಅರ್ಥ ಆಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ ವ್ಯಂಗ್ಯವಾಡಿದ್ದಾರೆ.

ನಾನು ಪ್ರಧಾನಿ ಆದರೆ ಅನಂತ ಕುಮಾರ್ ಹೆಗಡೆಯನ್ನು ಜೈಲಿಗೆ ಕಳುಹಿಸುತ್ತಿದೆ ಎಂದು ಹೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಎಂ.ಬಿ. ಪಾಟೀಲ್ ವಿರುದ್ದ ಸಂಸದ ಅನಂತಕುಮಾರ್​ ಹೆಗಡೆ ಹರಿಹಾಯ್ದಿದ್ದಾರೆ.

ಗೃಹ ಸಚಿವ ಎಂ.ಬಿ.ಪಾಟೀಲ್​ ಅವರು, ಹೆಗಡೆ ನಾಲಿಗೆ ಹರಿಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಅನಂತಕುಮಾರ್​ ಹೆಗಡೆ, ಎಂ.ಬಿ. ಪಾಟೀಲ್ ಎಲ್ಲಿದ್ದರೋ ಏನೋ ಗೊತ್ತಿಲ್ಲ. ದಾರಿ ತಪ್ಪಿ ಗೃಹ ಸಚಿವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಲವೇ ಅವರಿಗೆ ಉತ್ತರ ಕೊಡುತ್ತೆ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎನ್ನುತ್ತಾರೆ. ನಾನೇನಾದರೂ ಪ್ರಧಾನಿ ಆಗಿದ್ದರೆ ಅವರನ್ನು ಜೈಲಿಗೆ ಹಾಕುತ್ತಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೇ, ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ. ನರೇಂದ್ರ ಮೋದಿ ಅವರಪ್ಪನಾಣೆಗೂ ಮತ್ತೆ ಪ್ರಧಾನಿಯಾಗಲ್ಲ ಎಂದು ಭವಿಷ್ಯ ನುಡಿದಿದ್ದರು.

Comments are closed.