ಕರ್ನಾಟಕ

ಪುಲ್ವಾಮ ದಾಳಿಗೆ ಕಾರಣ ಭದ್ರತಾ ವೈಫಲ್ಯ; ಜೆಡಿಎಸ್​ ಶಾಸಕ

Pinterest LinkedIn Tumblr


ಮಂಡ್ಯ,: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ರಾಜಕೀಯ ವ್ಯಕ್ತಿಗಳು ದಿನಕ್ಕೊಂದು ಬಣ್ಣ ಕೊಡುತ್ತಿದ್ದಾರೆ. ಮಂಡ್ಯದ ಮಳವಳ್ಳಿ ಜೆಡಿಎಸ್​ ಶಾಸಕ ಡಾ.ಕೆ. ಅನ್ನದಾನಿ ಪುಲ್ವಾಮ ದಾಳಿ ಬಗ್ಗೆ ಮದ್ದೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಪುಲ್ವಾಮ ದಾಳಿ ಕೇಂದ್ರದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. 350 ಕೆಜಿ ಸ್ಫೋಟಕ ಬಳಸಿ ಈ ಸ್ಫೋಟದ ದಾಳಿ ಮಾಡಲಾಗಿದೆ. ಹಾಗಾದರೆ ಅಷ್ಟೊಂದು ಪ್ರಮಾಣದ ಸ್ಫೋಟಕ ದೇಶದ ಒಳಗೆ ಹೇಗೆ ಬಂತು ಅವರಿಗೆ? ಗಡಿಯಲ್ಲಿನ ಚೆಕ್​​​ಪೋಸ್ಟ್​​ನಲ್ಲಿರುವ ಸೈನಿಕ ಸಿಬ್ಬಂದಿಗಳು ಏನು ಮಾಡುತ್ತಿದ್ಧಾರೆ ಎಂದು ಪ್ರಶ್ನಿಸಿದರು.

ಒಂದು ನಾಯಿ ಗಡಿ ದಾಟಿದರೂ ಪ್ರಧಾನಿಗೆ ಮಾಹಿತಿ ಹೋಗುತ್ತದೆ. ಹೀಗಿರುವಾಗ ಇಷ್ಟೊಂದು ಪ್ರಮಾಣದ ಸ್ಪೋಟಕ ಗಡಿ ದಾಟಿ ಬಂದಿರುವ ಮಾಹಿತಿ ಅವರಿಗೆ ಇಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಗುಪ್ತಚರ ಇಲಾಖೆಯ ವೈಫಲ್ಯದಿಂದಲೇ ಈ ಘಟನೆ ನಡೆದಿದ್ದು, ಕೇಂದ್ರ ಸಂಪೂರ್ಣ ವೈಫಲ್ಯಗೊಂಡಿದೆ ಎಂದು ವಾಗ್ದಾಳಿ ನಡೆಸಿದ್ಧಾರೆ.

Comments are closed.