ಕರ್ನಾಟಕ

ಆಡಿಯೋ ಪ್ರಕರಣ: ಕೇಸ್ ಬುಕ್, ಯಡಿಯೂರಪ್ಪ ಆರೋಪಿ ನಂ.1

Pinterest LinkedIn Tumblr


ರಾಯಚೂರು: ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಆಪರೇಷನ್ ಆಡಿಯೋ ಪ್ರಕರಣ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಲಾಗಿದೆ.

ಗುರುಮಿಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕನೂರು ಅವರ ಪುತ್ರ ಶರಣಗೌಡ ಅವರು ಇಂದು [ಬುಧವಾರ] ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರ್ ಬಾಬು ಅವರನ್ನು ಭೇಟಿ ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.

ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಬೇಕಾಗಿತ್ತು. ಆದ್ರೆ ಸ್ಥಳೀಯ ಶಾಸಕನ ಅಭಿಮಾನಿಗಳು ಗದ್ದಲ ಮಾಡಬಹುದು ಎಂದು ನೇರವಾಗಿ ಎಸ್ ಪಿಗೆ ದೂರು ನೀಡಿದ್ದಾರೆ. ಹಾಗಾಗಿ ಈ ಕೇಸ್ ದೇವದುರ್ಗ ಪೊಲೀಸ್ ಠಾಣೆಗೆ ಒಳಪಟ್ಟಿದೆ.

ಮೊದಲ ಆರೋಪಿಯಾಗಿ ಬಿ ಎಸ್ ಯಡಿಯೂರಪ್ಪ, 2ನೇ ಆರೋಪಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ , 3ನೇ ಆರೋಪಿ ಹಾಸನ ಶಾಸಕ ಪ್ರೀತಂಗೌಡ ಮತ್ತು ಪತ್ರಕರ್ತ ಮರಮಕಲ್ ಎನ್ನುವರನ್ನು 4ನೇ ಆರೋಪಿಯನ್ನಾಗಿ ಮಾಡಲಾಗಿದೆ.

ಕ್ರೈ.19/2019 , ಕಲಂ 8 , 12 , ಭ್ರಷ್ಟಚಾರ ನಿಗ್ರಹ ಕಾಯಿದೆ 120 (ಬಿ) ಮತ್ತು ಐಪಿಸಿ 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

‘ಆಡಿಯೋ ಬಾಂಬ್‌’ ಪ್ರಕರಣ: ಸದನ ನಾಯಕರ ಸಂಧಾನ ಸಭೆ ವಿಫಲ!

ಫೆ.7 ರಾತ್ರಿ ಶಾಸಕ ನಾಗನಗೌಡ ಕಂದಕನೂರು ಅವರ ಪುತ್ರ ಶರಣಗೌಡ ಅವರನ್ನು ದೇವದುರ್ಗ ಪ್ರವಾಸಿ ಮಂದರಕ್ಕೆ ಕರೆಸಿಕೊಂಡು ಬಿಜೆಪಿಗೆ ಬರುವಂತೆ ಹಣದ ಆಮಿಷವೊಡ್ಡಿದ್ದರು.

ಆಡಿಯೋವನ್ನು ಸ್ವತಃ ಶರಣಗೌಡ ಅವರೇ ಸಿಎಂ ಕುಮಾರಸ್ವಾಮಿಗೆ ತಲುಪಿಸಿ ಅವರಿಂದ ಬಹಿರಂಗಗೊಳಿಸಿದ್ದರು. ಈ ಆಡಿಯೋದಲ್ಲಿ ಸ್ಪೀಕರ್ ಗೂ ಹಣದ ಆಮಿಷ ನೀಡಲಾಗಿದೆ ಅಂತೆಲ್ಲ ಇದೆ.

ಹಾಗಾಗಿ ಈ ಕ್ಲಿಪ್ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇನ್ನು ಈ ಬಗ್ಗೆ SIT ತನಿಖೆಗೆ ವಹಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂಗೆ ಸೂಚಿಸಿದ್ದಾರೆ. ಆದ್ರೆ SIT ತನಿಖೆ ಬೇಡವೇ ಬೇಡ ಎಂದು ರಾಜ್ಯ ಬಿಜೆಪಿ ಪಟ್ಟು ಹಿಡಿದಿದೆ.

Comments are closed.