ಕರ್ನಾಟಕ

ಆಪರೇಷನ್​ ಕಮಲ​; ರಾಜೀನಾಮೆಗೆ ಸಿದ್ದವಾದ ಕಾಂಗ್ರೆಸ್​ ಸಚಿವರು?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ನಿಂದ ಅತೃಪ್ತಗೊಂಡಿರುವ ಶಾಸಕರು ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ವಿಪ್​ ಜಾರಿ ಮಾಡಿದರೂ ಮತ್ತೆ ರಮೇಶ್​ ಜಾರಕಿಹೊಳಿ, ಉಮೇಶ್​ ಜಾಧವ್​, ಮಹೇಶ್​ ಕುಮಟಹಳ್ಳಿ, ಬಿ ನಾಗೇಂದ್ರ ಗೈರಾಗುವ ಮೂಲಕ ಆಪರೇಷನ್​ ಕಮಲ ನಡೆಯಲಿದೆ ಎಂಬ ಸುಳಿವನ್ನು ಬಿಟ್ಟುಕೊಂಡಿದ್ದಾರೆ. ಅಲ್ಲದೇ ಜಂಟಿ ಅಧಿವೇಶನದಂದು ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿರುವ ಬಿಜೆಪಿ ಈ ಅನುಮಾನದ ಹೊಗೆಯನ್ನು ಮತ್ತಷ್ಟು ಗಟ್ಟಿ ಮಾಡಿದೆ.

ರಾಜ್ಯ ಬೆಳವಣಿಗೆ ಕುರಿತು ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಈ ಆಪರೇಷನ್​ ಕಮಲದ ಕುರಿತು ಹೈಕಮಾಂಡ್​ಗೆ ನಿನ್ನೆ ವರದಿ ನೀಡಿದೆ. ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಬಿಜೆಪಿ ಸರ್ಕಾರ ಬೀಳಿಸುವ ಅವಿರಹಿತ ಯತ್ನ ಮನದಟ್ಟು ಮಾಡಲಾಗಿದೆ. ಈಗಾಗಲೇ ಎರಡ್ಮೂರು ಬಾರಿ ಬಿಜೆಪಿಯ ಈ ತಂತ್ರವನ್ನು ವಿಫಲಗೊಳಿಸಿ ದೇಶದ ಮಟ್ಟದಲ್ಲಿ ಕಮಲ ನಡೆಗೆ ಟೀಕೆ ವ್ಯಕ್ತವಾದರೂ ಇದನ್ನೆ ಮುಂದುವರೆಸಿರುವ ಅವರ ಕ್ರಮಕ್ಕೆ ರಾಹುಲ್​ ಕೂಡ ಆತಂಕ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸಲು ಬಿಡಬಾರದು ಎಂದು ಖಡಕ್​ ಸಂದೇಶನವನ್ನು ವೇಣುಗೋಪಾಲ್​ ಅವರಿಗೆ ನೀಡಿದ್ದಾರೆ.

ರಿವರ್ಸ್​ ಆಪರೇಷನ್​ ಕಮಲಕ್ಕೆ ಸಜ್ಜಾದ ಕಾಂಗ್ರೆಸ್​

ಬಿಜೆಪಿಗೆ ಆಪರೇಷನ್​ ಕಮಲ ನಿಲ್ಲಿಸುವುದಕ್ಕೆ ಮುಂದಾಗುತ್ತಿಲ್ಲ ಎಂಬ ಬಗ್ಗೆ ಅರಿತ ಕಾಂಗ್ರೆಸ್​ ಅಧ್ಯಕ್ಷ ನಮ್ಮ ಸರ್ಕಾರ ಉಳಿಸಲು ಸಲುವಾಗಿ ರಿವರ್ಸ್​ ಆಪರೇಷನ್​ಗೆ ಮುಂದಾಗುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಶಾಸಕರು ಬಿಜೆಪಿಗೆ ಹೋದರೆ ಬಿಜೆಪಿಯ ಶಾಸಕರನ್ನು ಕಾಂಗ್ರೆಸ್​ಗೆ ಕರೆತನ್ನಿ. ಅಲ್ಲದೇ ಅವರಿಗೆ ಸಚಿವ ಸ್ಥಾನವನ್ನು ನೀಡುವುದಾಗಿ ತಿಳಿಸಿ ಎಂದಿದ್ದಾರೆ. ಮೈತ್ರಿ ಸರ್ಕಾರದಲ್ಲಿ ತಮ್ಮ ಪಾಲಿನ ಎಲ್ಲ ಸಚಿವ ಸ್ಥಾನಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿಯಿಂದ ಬಂದ ಶಾಸಕರಿಗೆ ಸಚಿವ ಸ್ಥಾನ ಮಾಡಬೇಕಾದರೆ ನಮ್ಮ ಸಚಿವರು ಸ್ಥಾನ ತ್ಯಾಗಕ್ಕೆ ಮುಂದಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸಚಿವರು ಸರ್ಕಾರ ಉಳಿಸಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಬೇಕು ಎಂದು ಸೂಚಿಸಿದ್ದಾರೆ.

ಜೆಡಿಎಸ್​ನ ಎರಡು ಸ್ಥಾನ ಖಾಲಿ ಇದ್ದು, ಆ ಸ್ಥಾನವನ್ನು ಪಕ್ಷಕ್ಕೆ ಬಂದವರಿಗೆ ನೀಡುವ ಕುರಿತು ತಿಳಿಸಿದ್ದಾರೆ. ನಾಲ್ಕು ಶಾಸಕರು ಏನಾದರೂ ಕಾಂಗ್ರೆಸ್​ ಕೈ ಹಿಡಿದರೆ ಈ ಶಾಸಕರಿಗೆ ಈ ನಾಲ್ಕು ಸಚಿವ ಸ್ಥಾನ ನೀಡುವ ಬಗ್ಗೆ ಮನದಟ್ಟು ಮಾಡುವಂತೆ ತಿಳಿಸಲಾಗಿದೆ.

ಡಿಕೆಶಿ, ಜೆಡಿಎಸ್​ ನಾಯಕರಿಗೆ ಹೊಣೆ

ಆಪರೇಷನ್​ ಕಮಲಕ್ಕೆ ಪ್ರತಿಯಾಗಿ ರಿವರ್ಸ್​ ಆಪರೇಷನ್​ ನಡೆಸಲು ಸೂಚನೆ ನೀಡಿರುವ ಹೈ ಕಮಾಂಡ್​ ಇದರ ಹೊಣೆಯನ್ನು ಸಚಿವ ಡಿಕೆ ಶಿವಕುಮಾರ್ ಹಾಗೂ ಜೆಡಿಎಸ್​ ನಾಯಕರಿಗೆ ವಹಿಸಿದ್ದಾರೆ.ಪಕ್ಷಕ್ಕೆ ಸೂಕ್ತವಾದ ಅಭ್ಯರ್ಥಿಗಳು ಯಾರು. ಯಾರನ್ನು ಬಿಜೆಪಿಯಿಂದ ಕರೆತರಬಹುದು ಎಂಬ ಬಗ್ಗೆ ಪಟ್ಟಿ ಮಾಡಿ ಅವರನ್ನು ಸಂಪರ್ಕಿಸುವಂತೆ ತಿಳಿಸಿದೆ.

ಸರ್ಕಾರ ಉಳಿಸುವ ಟ್ರಬಲ್​ ಶೂಟರ್​ ಆಗಿರುವ ಡಿಕೆ ಶಿವಕುಮಾರ್ , ಈ ಹಿಂದೆ ಮಾತನಾಡಿದ ಅವರು, ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಬಿದ್ದರೆ ನಾನು ನನ್ನ ಸಚಿವ ಸ್ಥಾನ ಬಿಡಲು ಸಿದ್ದವಾಗಿದ್ದೇನೆ ಎಂದು ಹೇಳಿದ್ದರು. ಈಗ ಅವರ ಹೆಗಲಿಗೆ ಈ ಜವಬ್ದಾರಿ ಹೋಗಿದೆ

ಸುಳಿವು ಬಿಟ್ಟುಕೊಟ್ಟ ಡಿಸಿಎಂ

ರಿವರ್ಸ್​ ಆಪರೇಷನ್​ ಕಮಕ್ಕೆ ಕೈ ನಾಯಕರು ಮುಂದಾಗಿರುವ ಬಗ್ಗೆ ಉಪಮುಖ್ಯಮಂತ್ರಿ ಪರಮೇಶ್ವರ್​ ಸುಳಿವು ನೀಡಿದ್ದಾರೆ. ಈ ಕುರಿತು ನ್ಯೂಸ್​ 18 ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಬಿಜೆಪಿ ನಾಯಕರು ಬೆಲೆ ತೆರಲಿದ್ದಾರೆ. ಆಮಿಷ ಒಡ್ಡಿ ಸರ್ಕಾರವನ್ನು ಪರೀಕ್ಷೆಗೊಳಪಡಿಸಿದ್ದಾರೆ ಎಂದರು

Comments are closed.