ಕರ್ನಾಟಕ

ಈ ಬಾರಿ ಯಡಿಯೂರಪ್ಪ ಬಜೆಟ್​ ಮಂಡನೆ ಮಾಡುವುದು ಖಚಿತ; ಶಾಸಕ ಉಮೇಶ್​ ಕತ್ತಿ

Pinterest LinkedIn Tumblr


ಚಿಕ್ಕೋಡಿ: ಸದ್ಯದ ರಾಜಕೀಯ ವಾತಾವರಣ ನೋಡಿದರೆ ಸರ್ಕಾರ ಉರುಳುವುದು ಖಚಿತ. ಶೀಘ್ರದಲ್ಲೇ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಸಿಎಂ ಆಗಿ ಯಡಿಯೂರಪ್ಪ ಬಜೆಟ್ ಮಂಡಿಸುತ್ತಾರೆ ಎಂದು ಬಿಜೆಪಿ ಶಾಸಕ ಉಮೇಶ್​ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಚ್​.ಡಿ. ಕುಮಾರಸ್ವಾಮಿ ಈ ಬಾರಿಯ ಬಜೆಟ್ ಮಂಡನೆ ಮಾಡುವುದಿಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಖಚಿತ. 25 ಕೈ ಶಾಸಕರು ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಅನುಯಾಯಿ ಶಾಸಕರೇ ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದಾರೆ. ಬಿಜೆಪಿಯ ಶಾಸಕರು ರೆಸಾರ್ಟ್​ಗೆ ಹೋಗುತ್ತಿಲ್ಲ. ಪಕ್ಷೇತರರು ಸೇರಿ ಬಿಜೆಪಿ ಬಳಿ 106 ಶಾಸಕರಿದ್ದಾರೆ. 8 ಜನ ರಾಜೀನಾಮೆ ಕೊಟ್ಟರೆ ಹೊಸ ಸರ್ಕಾರ ರಚನೆಯಾಗುವುದು ಖಂಡಿತ ಎಂದು ಹುಕ್ಕೇರಿಯಲ್ಲಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.

ಸರ್ಕಾರವನ್ನು ಬೀಳಿಸಲು ಬೇರೆ ಯಾರೂ ಬೇಕಾಗಿಲ್ಲ. ಮೈತ್ರಿ ಸರ್ಕಾರದಲ್ಲಿ ಸಿದ್ದರಾಮಯ್ಯನವರೇ ಆಟ ಆಡುತ್ತಿದ್ದಾರೆ. ಲೋಕಸಭಾ ಚುನಾವಣೆ ಸೀಟು ಹಂಚಿಕೆ ಹೊಂದಾಣಿಕೆ ಆಗುತ್ತಿಲ್ಲ. ಸಚಿವ ಸಾರಾ ಮಹೇಶ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್​ ತನ್ನ ಶಾಸಕರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿ. ಇಲ್ಲವಾದಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಉಮೇಶ ಕತ್ತಿ ಗುಡುಗಿದ್ದಾರೆ.

Comments are closed.