ಕರ್ನಾಟಕ

ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ ಇಲ್ಲ, ಬೇಕಿದ್ದರೆ ಕುಮಾರಸ್ವಾಮಿ ರಾಜೀನಾಮೆ ಕೊಡಲಿ

Pinterest LinkedIn Tumblr


ತುಮಕೂರು: ‘ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್​ ಇಲ್ಲ. ಸಿಎಂ ಕುಮಾರಸ್ವಾಮಿ ಬೇಕಿದ್ರೆ ರಾಜೀನಾಮೆ ಕೊಡಲಿ’ ಎಂದು ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಗುಡುಗಿದರು.

ತುಮಕೂರಿನಲ್ಲಿ ಇಂದು [ಸೋಮವಾರ] ಮಾತನಾಡಿದ ರಾಜಣ್ಣ, ಬುಡನ್ ಸಾಬ್ರಿಗೂ ಹೆಂಡ್ರಿಲ್ಲ, ಬೂವಮ್ಮನಿಗೂ ಗಂಡನಿಲ್ಲ ಅನ್ನೋ ಹಾಗಾಗಿದೆ ಜೆಡಿಎಸ್ ಕಾಂಗ್ರೆಸ್ ಸಹವಾಸ.

ಕಾಂಗ್ರೆಸ್ ಶಾಸಕರನ್ನ ಹದ್ದುಬಸ್ತಿನಲ್ಲಿಟ್ಟುಕೊಳ್ಳೋಕೆ ಅವರೇನು ಚಿಕ್ಕ ಮಕ್ಳಾ. ಬಿಜೆಪಿಯನ್ನ ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕೆ ಜೆಡಿಎಸ್‌ಗೆ ಸಿಎಂ ಸ್ಥಾನ ನೀಡಿದ್ದೇವೆ ಎಂದು ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

ತುಮಕೂರು ಲೋಕಸಭಾ ಕ್ಷೇತ್ರವನ್ನ ಜೆಡಿಎಸ್‌‌ಗೆ ಬಿಟ್ಟುಕೊಡುವ ವಿಚಾರದ ಕುರಿತು ಮಾಜಿ ಶಾಸಕ ಕೆ.ಎನ್.ರಾಜಣ್ಣ, ಪ್ರಸ್ತುತ ಕಾಂಗ್ರೆಸ್ ಸಂಸದರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವಾಗ ನಮಗೇ ಬಿಟ್ಟುಕೊಡಿ ಎಂದು ಜೆಡಿಎಸ್‌ ನವರು ಕೇಳುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಬೇಡ್ವಾ? ಎಂದು ವಾಗ್ದಾಳಿ ನಡೆಸಿದರು.

8 ಕ್ಷೇತ್ರದಲ್ಲಿ ನಾವೇ ಮುಂದಿದ್ದೇವೆ ಎನ್ನುವುದಾದರೆ, ಹಿಂದೆ 4 ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದನ್ನ ಜೆಡಿಎಸ್‌ ನವರು ಮರೆತು ಬಿಟ್ರಾ? ಒಂದು ವೇಳೆ ಜೆಡಿಎಸ್‌ಗೆ ಬಿಟ್ಟು ಕೊಟ್ರೆ ನನ್ನದೊಂದು ಅರ್ಜಿ ಇದ್ದೇ ಇರುತ್ತೆ ಎಂದು ಮಾಜಿ ಶಾಸಕ ರಾಜಣ್ಣ ಬಂಡಾಯವೆದ್ದು ಸ್ಪರ್ಧೆ ಮಾಡುವ ಬಗ್ಗೆಯೂ ಎಚ್ಚರಿಕೆ ನೀಡಿದರು.

Comments are closed.