ಕರ್ನಾಟಕ

ನಮ್ಮದು ಲಾಲಿಪಪ್, ನಿಮ್ಮದು ಬಾಂಬೆ ಮಿಠಾಯಿನಾ?: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ನಾವು ರೈತರಿಗಾಗಿ ಘೋಷಿಸಿದ್ದ 48 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾವನ್ನು ಕೇಂದ್ರ ಸರ್ಕಾರ ಲಾಲಿ ಪಪ್ ಅಂತ ಹೇಳಿದ್ದರು. ಈಗ ನಿಮ್ಮ ಹೊಸ ಯೋಜನೆಯಿಂದ ರಾಜ್ಯದ 59 ಲಕ್ಷ ರೈತರಿಗೆ ಬರುವಂತಹ ಹಣ ಕೇವಲ 3528 ಕೋಟಿ. ಈ ಯೋಜನೆಗೆ ಏನಂತ ಹೇಳಬೇಕು..ಬಾಂಬೆ ಮಿಠಾಯಿ ಬಜೆಟ್ ಅಂತ ಕರೆಯಬೇಕಾ..ಇದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರದ ಮಧ್ಯಂತರ ಬಜೆಟ್ ಮಂಡನೆಯಾದ ಬಳಿಕ ನೀಡಿದ ಪ್ರತಿಕ್ರಿಯೆ.

ಶುಕ್ರವಾರ ಕೇಂದ್ರ ಬಜೆಟ್ ಮಂಡನೆಯಾದ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಒಂದು ಮಾತನ್ನು ಕೇಳಲಿಕ್ಕೆ ಬಯಸುತ್ತೇನೆ, ಈ ಬಜೆಟ್ ಅನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ತಯಾರು ಮಾಡಿದ್ದೋ ಅಥವಾ ಆರ್ ಎಸ್ ಎಸ್ ನವರೋ ಎಂದು ಎಂದು ಟೀಕಿಸಿದರು.

ಕಳೆದ ಐದು ವರ್ಷದಿಂದ ಜನ ನಿರೀಕ್ಷಿಸುತ್ತಿದ್ದರು. ಆ ನಿಟ್ಟಿನಲ್ಲಿ 5 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಿದ್ದಾರೆ. ಆದರೆ ಈ ಬಾರಿಯ ಬಜೆಟ್ ಬಗ್ಗೆ ಜನರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆ ಹುಸಿಯಾದಂತಾಗಿದೆ ಎಂದರು.

ಕರ್ನಾಟಕಕ್ಕೆ ಸಬ್ ಅರ್ಬನ್ ರೈಲ್ವೆ ಯೋಜನೆಗೂ ಅನುಮತಿ ಕೊಟ್ಟಿಲ್ಲ, ರೈತರ ಸಾಲಮನ್ನಾದ ಬಗ್ಗೆಯೂ ಏನೂ ಹೇಳಿಲ್ಲ. ಕೇಂದ್ರದ ಈ ಬಜೆಟ್ ಸಂಪೂರ್ಣ ವಿಫಲ ಎಂದು ದೂರಿದರು. ಚುನಾವಣಾ ಸಂದರ್ಭದ ಹಿನ್ನೆಲೆಯಲ್ಲಿ ಜನರನ್ನು ಒಲೈಸಲು ಈ ಬಜೆಟ್ ಘೋಷಿಸಿದ್ದಾರೆ ಎಂದು ಹೇಳಿದರು.

Comments are closed.