ಕರ್ನಾಟಕ

ಭೂಗತ ಪಾತಕಿ ರವಿ ಪೂಜಾರಿ ಬಂಧನ ಖಚಿತ

Pinterest LinkedIn Tumblr


ಬೆಂಗಳೂರು: 15 ವರ್ಷಗಳಿಗೂ ಹೆಚ್ಚು ಕಾಲ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಕರಾವಳಿ ಮೂಲದ ಭೂಗತ ಪಾತಕಿ ರವಿ ಪೂಜಾರಿ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶದಲ್ಲಿ ಬಂಧಿಸಲ್ಪಟ್ಟಿರುವುದು ಖಚಿತವಾಗಿದೆ. ಸೆನೆಗಲ್ ದೇಶದ ರಾಜಧಾನಿಯಾಗಿರುವ ಡಾಕರ್ ನಲ್ಲಿ ಜನವರಿ 22ರಂದೇ ರವಿ ಪೂಜಾರಿ ಬಂಧನವಾಗಿರುವುದು ಇದೀಗ ಖಚಿತವಾಗಿದೆ. ಸದ್ಯಕ್ಕೆ ರವಿ ಪೂಜಾರಿಯನ್ನು ಡಾಕರ್ ನಲ್ಲಿರುವ ರೆಬ್ಯೂಸ್ ಡಿಟಕ್ಷನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ರವಿ ಪೂಜಾರಿ ಮೇಲೆ ಕರ್ನಾಟಕದಲ್ಲಿ 18-20 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನಲ್ಲಿ ಈತನ ವಿರುದ್ಧ 3 ಶೂಟ್ ಔಟ್ ಮತ್ತು 3 ಕೊಲೆ ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಈ ಭೂಗತ ಪಾತಕಿಯ ವಿರುದ್ಧ ಸುಮಾರು 60 ಪ್ರಕರಣಗಳು ದಾಖಲಾಗಿವೆ.

ದೂರವಾಣಿ ಕರೆಗಳನ್ನು ಮಾಡಿ ಉದ್ಯಮಿಗಳನ್ನು, ರಾಜಕಾರಣಿಗಳನ್ನು ಮತ್ತು ಬಾಲಿವುಡ್ ನಟರನ್ನು ಹೆದರಿಸಿ ತನ್ನ ಸಹಚರರ ಮೂಲಕ ಹಫ್ತಾ ವಸೂಲು ಮಾಡಿಸುತ್ತಿದ್ದ ಕುಖ್ಯಾತಿ ಈತನಿಗಿದೆ. ಈತ ಆ್ಯಂಟೋನಿ ಫೆರ್ನಾಂಡೀಸ್ ಎಂಬ ಹೆಸರಿನಲ್ಲಿ ಆಫ್ರಿಕಾ ದೇಶಗಳಲ್ಲಿ ತಿರುಗುತ್ತಿದ್ದ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

Comments are closed.