ಕರ್ನಾಟಕ

ಪ್ರಜ್ವಲ್ ರೇವಣ್ಣ ರಾಜಕೀಯ ಪ್ರವೇಶಕ್ಕೆ ಅಮ್ಮ ಅಡ್ಡಗಾಲು, ಮಾವನ ಪರ ಭವಾನಿ ರೇವಣ್ಣ ಬ್ಯಾಟಿಂಗ್

Pinterest LinkedIn Tumblr


ಹಾಸನ: ಲೋಕಸಮರಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಲೋಕಸಭಾ ಅಖಾಡಕ್ಕೆ ಧುಮುಕಿದ್ದು, ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿಗಳ ಮಧ್ಯೆ ಫೈಟ್ ಶುರುವಾಗಿದೆ.

ಎಚ್.ಡಿ.ದೇವೇಗೌಡ ಅವರು ತಮ್ಮ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಬಿಟ್ಟುಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲುಸುವಂತೆ ಕರೆ ಕೊಟ್ಟಿದ್ದಾರೆ.

ಆದ್ರೆ ಇದಕ್ಕೆ ಹಾಸನ ಸ್ಥಳೀಯ ಕಾಂಗ್ರೆಸ್ ನಾಯಕರು ವಿರೊಧ ವ್ಯಕ್ತಪಡಿಸಿದ್ದು, ಇಲ್ಲಿ ದೇವೇಗೌಡರು ನಿಂತರೆ ಮಾತ್ರ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇವೆ. ಪ್ರಜ್ವಲ್ ರೇವಣ್ಣ ನಿಂತರೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ಇದ್ರಿಂದ ಹಾಸನಲ್ಲಿ ದೋಸ್ತಿಗಳ ಮಧ್ಯೆ ವೈರತ್ವ ಮುಂದುವರಿದಿದೆ.

ಇದರ ನಡುವೆಯೇ ರೇವಣ್ಣ ಪತ್ನಿ ಭವಾನಿ ರೇವಣ್ಣ ಸಹ ತಮ್ಮ ಮಾವನ ಪರ ಬ್ಯಾಟಿಂಗ್ ಮಾಡಿದ್ದು, ದೇವೇಗೌಡರನ್ನೇ ಸ್ಪರ್ಧೆ ಮಾಡುವಂತೆ ಇರಾದೆ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಪ್ರಜ್ವಲ್ ಸ್ಪರ್ಧೆ ವಿಚಾರವಾಗಿ ಹಾಸನದ ಬೇಲೂರಿನಲ್ಲಿ ಮಾತನಾಡಿದ ಭವಾನಿ ರೇವಣ್ಣ, ಹಾಸನದಿಂದ ಎಚ್.ಡಿ. ದೇವೇಗೌಡರೇ ಚುನಾವಣೆಗೆ ಸ್ಪರ್ಧಿಸಲಿ ಎಂಬುದು ನನ್ನ ಒತ್ತಾಯ.

ಈ ಬಗ್ಗೆ ಮೂರ್ನಾಲ್ಕು ಬಾರಿ ನಾನು ಕೂಡ ಒತ್ತಾಯ ಮಾಡಿದ್ದೇನೆ. ಈಗಾಗಲೇ ದೇವೇಗೌಡರ ಜೊತೆ ಮಾತಾಡಿದ್ದೇನೆ. ಅವರೇ ಸ್ಪರ್ಧಿಸಬೇಕೆಂಬುದು ನನ್ನ ವೈಯಕ್ತಿಕ ಆಸೆ ಎಂದು ಹೇಳಿದ್ದಾರೆ.

ಈ ಮೂಲಕ ಪ್ರಜ್ವಲ್ ಆಸೆ ತಣ್ಣೀರೆರಚಿದ್ದಾರೆ. ಈಗಾಲೇ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ರೆ, ಭವನಿ ರೇವಣ್ಣ ಅವರು ದೊಡ್ಡ ಗೌಡ್ರ ಪರ ಬ್ಯಾಟಿಂಗ್ ಮಾಡುವ ಮೂಲಕ ಪ್ರಜ್ವಲ್ ಗೆ ಶಾಕ್ ಕೊಟ್ಟಿದ್ದಾರೆ.

Comments are closed.