ಕರ್ನಾಟಕ

ಅಜ್ಜಿಯ ಕೈ ತಪ್ಪಿಸಿಕೊಂಡು ಮೆಟ್ರೋ ಎಸ್ಕಿಲೇಟರ್ ನಿಂದ ಬಿದ್ದ ಬಾಲಕಿ ದಾರುಣ ಸಾವು

Pinterest LinkedIn Tumblr

ಬೆಂಗಳೂರು: ಶ್ರೀರಾಂಪುರ ಮೆಟ್ರೋ ನಿಲ್ದಾಣದ ಮೊದಲ ಮಹಡಿಯಲ್ಲಿದ್ದ ಅಜ್ಜಿ ಕೈ ತಪ್ಪಿ ಒಂದೂವರೆ ವರ್ಷದ ಬಾಲಕಿ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಡಾ. ರಾಜ್​ಕುಮಾರ್ ರಸ್ತೆ ಪ್ರಕಾಶನಗರದ ಹಾಸಿನಿ ಗಾಯಗೊಂಡ ಬಾಲಕಿ.

(ಸಾಂದರ್ಭಿಕ ಚಿತ್ರ)

ಭಾನುವಾರ ರಾತ್ರಿ 8.15ರಲ್ಲಿ ಅವಘಡ ಸಂಭವಿಸಿದೆ. ಶ್ರೀರಾಂಪುರ ಮೆಟ್ರೋ ನಿಲ್ದಾಣದ ಮೊದಲ ಮಹಡಿಯಿಂದ ಬಾಲಕಿಯ ಚಿಕ್ಕಪ್ಪ ಕುಮಾರ್, ತಾಯಿ ಮತ್ತು ಅಜ್ಜಿ-ತಾತ ಫ್ಲಾಟ್​ಫಾರಂಗೆ ತೆರಳುತ್ತಿದ್ದರು. ಮೊಮ್ಮಗಳನ್ನು ಬಲಗೈಯಲ್ಲಿ ಎತ್ತಿಕೊಂಡು ಎಸ್ಕಲೇಟರ್ ಮೇಲೆ ಕಾಲಿಟ್ಟು ಮುಂದೆ ಸಾಗುತ್ತಿದ್ದಂತೆ ಗಾಬರಿಗೊಂಡ ಅಜ್ಜಿ ಕೈಯಿಂದ ಮಗು ತಪ್ಪಿಸಿಕೊಂಡು ಕೆಳಕ್ಕೆ ಬಿದ್ದಿದ್ದು ಬಾಲಕಿ ಹಾಸಿನಿ ತಲೆಗೆ ಗಂಭೀರ ಗಾಯವಾಗಿತ್ತು. ಎಸ್ಕಲೇಟರ್ ಪಕ್ಕದಲ್ಲಿರುವ ತೆರೆದ ಜಾಗದ ಮೂಲಕ ಬಾಲಕಿ ಮೊದಲ ಮಹಡಿಯಿಂದ 35 ಅಡಿ ಕೆಳಗೆ ರಸ್ತೆಗೆ ಬಿದ್ದಿದ್ದಾಳೆ.

ಸ್ಥಳಕ್ಕೆ ಸುಬ್ರಮಣ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.