ಕರ್ನಾಟಕ

ರಾತ್ರೋರಾತ್ರಿ ರೌಡಿ ಶೀಟರುಗಳ ಮನೆ ಬಾಗಿಲು ತಟ್ಟಿದ ಡಿಸಿಪಿ ಅಣ್ಣಾಮಲೈ

Pinterest LinkedIn Tumblr

ಬೆಂಗಳೂರು: ಡಿಸಿಪಿ ಅಣ್ಣಾಮಲೈ ಹಾಗೂ ಎಸಿಪಿ ಮಹದೇವ್ ನೇತೃತ್ವದಲ್ಲಿ ದಕ್ಷಿಣ ವಿಭಾಗದ ಪೊಲೀಸರು ರಾತ್ರೋ ರಾತ್ರಿ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಸುಬ್ರಮಣ್ಯಪುರ , ತಲಘಟ್ಟಪುರ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರೌಡಿ ಶೀಟರ್ ಗಳ‌ ಮನೆ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಒಟ್ಟು 32 ರೌಡಿಶೀಟರ್ ಗಳು ಹಾಗೂ 44 MOB ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅನಧಿಕೃತವಾಗಿ ಹಾಗೂ ದಾಖಲೆಗಳಿಲ್ಲದೇ ರೌಡಿಶೀಟರ್ ಗಳು ಬಳಕೆ ಮಾಡುತ್ತಿದ್ದ 71 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Comments are closed.