ಕರ್ನಾಟಕ

ಸಿದ್ದಗಂಗಾ ಶ್ರೀ ಶಿವೈಕ್ಯರಾದ ಬೆನ್ನಲ್ಲೇ ಕಾಣೆಯಾದ ಅವರ ಅಚ್ಚುಮೆಚ್ಚಿನ ‘ಭೈರ’ !

Pinterest LinkedIn Tumblr

ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಮೊನ್ನೆ ಸೋಮವಾರ ಶಿವೈಕ್ಯರಾಗಿದ್ದ ಬೆನ್ನಲ್ಲೇ ಅವರ ಅಚ್ಚುಮೆಚ್ಚಿನ ನಾಯಿ “ಭೈರ” ಸಹ ಕಾಣೆಯಾಗಿರುವುದಾಗಿ ವರದಿಯಾಗಿದೆ. ಡಾ. ಶಿವಕುಮಾರ ಶ್ರೀಗಳು ಮಾನವ ಕುಲಕ್ಕಷ್ತೇ ಅಲ್ಲದೆ ಪ್ರಾಣಿಗಳ ಮೇಲೆ ಸಹ ಅಪಾರ ಪ್ರೀತಿ ಇರಿಸಿಕೊಂಡಿದ್ದರು. ಭೈರ ಸದಾ ಅವರೊಡನೆ ಇಇರುತ್ತಿದ್ದ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದು ಇದೀಗ ಆ ಯೋಗಿ ಕಣ್ಮರೆಯಾಗಿದ್ದು ನಾಯಿ ಅವರ ಮೆಚ್ಚಿನ ನಾಯಿ ಸಹ ನಾಪತ್ತೆಯಾಗಿದೆ.

ಇನ್ನೂ ವಿಶೇಷವೆಂದರೆ ಶ್ರೀಗಳು ಆಸ್ಪತ್ರೆಗೆ ದಾಖಲಾದಂದಿನಿಂದ ಭೈರ ಶ್ರೀಗಳನ್ನು ಕಾಣದೆ ಕಂಗಾಲಾತ್ತು ಎನ್ನಲಾಗಿದ್ದು ಶ್ರೀಗಳು ಸಹ ಆಸ್ಪತ್ರೆಯಲ್ಲಿದ್ದಾಗಲೇ ಭೈರನ ಕುರಿತು ಕಿರಿಯ ಶ್ರೀಗಳಲ್ಲಿ ವಿಚಾರಿಸಿದ್ದರು.

ಶ್ರೀಗಳಿಗಾಗಿ ಮಠದ ಸುತ್ತ ಮುತ್ತ ಓಡಾಡುತ್ತಿದ್ದ ಭೈರ ಶ್ರೀಗಳ ದೇಹಾಂತಕ್ಕೆ ಮೂರು ದಿನಗಳ ಮುನ್ನವೇ ಅನ್ನ, ನೀರು ಸೇವನೆಯನ್ನು ತೊರೆದಿದ್ದನೆನ್ನುವುದು ಗುರುಗಳ ಮೇಲೆ ಮೂಕಪ್ರಾಣಿಯೊಂದಕ್ಕಿದ್ದ ಪ್ರೀತಿಗೆ ಸಾಕ್ಷಿ.

ಇದೀಗ ಶ್ರೀಗಳು ಶಿವೈಕ್ಯವಾಗಿದ್ದು ಶ್ರೀಗಳು ಶಿವೈಕ್ಯರಾದ ದಿನದಿಂದಲೂ ಭೈರ ಸಹ ನಾಪತ್ತೆಯಾಗಿದೆ. ಮಠದಲ್ಲಿನ ಸಿಬ್ಬಂದಿ ಹೇಳಿದಂತೆ ಶ್ರೀಗಳು ಎಲ್ಲಿಯೇ ಹೋದರೂ, ಭಕ್ತಾದಿಗಳಿಗೆ ದರ್ಶನ ನಿಡುವಾಗಲೂ ಬೈರ ಅವರ ಜಾಗಕ್ಕೆ ತೆರಳಿ ಅಲ್ಲಿ ಕುಳಿತು ಅಳುತ್ತಿತ್ತು. ಇನ್ನು ಶ್ರೀಗಳು ಎಲ್ಲೇ ಪರಿಶೀಲನೆಗೆ ತೆರಳಿದ್ದರೆ ಭೈರ ಸಹ ಅವರೊಡನೆ ತೆರಳುತ್ತಿತ್ತು.

ಇದೀಗ ಮೂರು ದಿನಗಳಿಂದ ಕಾಣೆಯಾಗಿರುವ ಭೈರ ಸಹ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಮಠದ ಸಿಬ್ಬಂದಿ ಹೇಳಿದ್ದಾರೆ.

Comments are closed.