ಕರ್ನಾಟಕ

ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್ ಆದ ಶ್ರೀಗಳ ನುಡಿಮುತ್ತು

Pinterest LinkedIn Tumblr


ಬೆಂಗಳೂರು: ತ್ರಿವಿಧ ದಾಸೋಹಿ, ಸಿದ್ದಗಂಗೆಯ ಯೋಗಿಯ ನುಡಿಮುತ್ತಗಳ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯಾರನ್ನು ಹಿಂಸಿಸಬೇಡಿ, ಸುಳ್ಳು ಮಾತನಾಡಬೇಡಿ, ಇತರರನ್ನು ಅಸಹ್ಯವಾಗಿ ನೋಡಬೇಡಿ, ಯಾರನ್ನು ಅವಮಾನಿಸಬೇಡಿ ಎಂದು ಶ್ರೀಗಳು ಕಿವಿಮಾತು ಹೇಳಿರುವ ವೀಡಿಯೋ ಇದಾಗಿದೆ.

ಬಸವಣ್ಣ ಅವರ ಜನಪ್ರಿಯ ವಚನವನ್ನಾಧರಿಸಿ ಇಂಗ್ಲಿಷ್ ಭಾಷೆಯಲ್ಲಿ ಶ್ರೀಗಳು ಈ ನುಡಿಮುತ್ತುಗಳನ್ನು ಹೇಳಿದ್ದಾರೆ…
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ!!

ನಡೆದಾಡುವ ದೇವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲೂ ಲಿಂಗೈಕ್ಯರಾಗುವ ಮುನ್ನ ಕಿರಿಯ ಶ್ರೀಗಳ ಬಳಿ ಹೇಳಿಕೊಂಡ ಕೊನೆಯ ಆಸೆ ಹಾಗೂ ನುಡಿಮುತ್ತಿನ ವೀಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಶ್ರೀಗಳ ಭಾವಚಿತ್ರ ಹಾಗೂ ಸಂದೇಶಗಳೇ ಹರಿದಾಡುತ್ತಿವೆ.

Comments are closed.