ಕರ್ನಾಟಕ

ಶಾಸಕ ಅನ್ನುವುದನ್ನು ಮರೆತಿದ್ದಿಯಾ: ಗಣೇಶ್ ಗೆ ಸಿದ್ದರಾಮಯ್ಯ ತರಾಟೆ!

Pinterest LinkedIn Tumblr


ಬೆಂಗಳೂರು: ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದು, ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕರ ಸಭೆಯಲ್ಲಿ ರೆಸಾರ್ಟ್ ಗಲಾಟೆ ಬಗ್ಗೆ ಪ್ರಸ್ತಾಪ ಆಗುತ್ತಿದ್ದಂತೆ ಗಣೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಏಕವಚನದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನೀನು ಶಾಸಕ ಎಂಬುದನ್ನು ಮರೆತಿದ್ದೀಯಾ, ಇದರಿಂದ ಕಾಂಗ್ರೆಸ್ ಇಮೇಜ್ ಗೆ ಸಾಕಷ್ಟು ಡ್ಯಾಮೇಜ್ ಆಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೂ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,.ಸಿ ವೇಣುಗೋಪಾಲ್ ಪ್ರಶ್ನಿಸಿದ್ದಾರೆ, ನಿಮ್ಮ ನೇತೃತ್ವ ಇದ್ದರೂ ಘಟನೆ ಹೇಗಾಯ್ತು ಎಂದು ಕೇಳಿದ್ದಾರೆ, ಆದರೆ ಇದಕ್ಕೆ ಉತ್ತರಿಸಲು ಶಿವಕುಮಾರ್ ತಡವರಿಸಿದರು ಎಂದು ಹೇಳಲಾಗಿದೆ.

Comments are closed.