ಕರ್ನಾಟಕ

ತನ್ನನ್ನು ಕ್ಲರ್ಕ್ ಎಂದಿದ್ದ ಮೋದಿ ವಿರುದ್ಧ ಕುಮಾರಸ್ವಾಮಿ ಮತ್ತೆ ಕಿಡಿ!

Pinterest LinkedIn Tumblr


ಮೈಸೂರು: ತನ್ನನ್ನು ಕ್ಲರ್ಕ್ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಿಎಂ ಎಚ್​​​.ಡಿ ಕುಮಾರಸ್ವಾಮಿ ಮತ್ತೆ ಕಿಡಿಕಾರಿದ್ದಾರೆ. ನರೇಂದ್ರ ಮೋದಿಯವರಿಗೆ ನಾನು ಕ್ಲರ್ಕ್​​ ಎಂದು ಹೇಳಿದವರು ಯಾರು? ನಮ್ಮ ಸರ್ಕಾರದ ಬಗ್ಗೆ ಮೋದಿ ಅವರಿಗೆ ಅಪಾರ ಭಯವಿದೆ. ಹೀಗಾಗಿಯೇ ಮೈತ್ರಿ ಸರ್ಕಾರದ ವಿರುದ್ಧ ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಪ್ರಧಾನಿ ಮೋದಿ ನಡೆಗೆ ಸಿಎಂ ಎಚ್​​ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್​ಡಿಕೆ, ನಾನು ಕ್ಲರ್ಕ್ ಆಗಿದ್ದರೇ; ಈ ಬಗ್ಗೆ ಮೋದಿಗೆ ನಾನೇ ಹೇಳಿರಬೇಕು. ಇಲ್ಲವಾದಲ್ಲಿ ರಾಜ್ಯ ಬಿಜೆಪಿ ನಾಯಕರೇ ಪ್ರಧಾನಿಗಳಿಗೆ ತಪ್ಪು ಸಂದೇಶ ರವಾನಿಸಿರಬೇಕು. ತಮ್ಮ ಪಕ್ಷದ ಮುಖಂಡರ ಮಾತು ಕೇಳಿಕೊಂಡು ನರೇಂದ್ರ ಮೋದಿಯವರು ಈ ಮಟ್ಟಕ್ಕೆ ಇಳಿಯಬಾರದು. ಬದಲಿಗೆ ಪ್ರಧಾನಿ ಹುದ್ದೆಯನ್ನು ಗೌರವಿಸಿ ಸರಿಯಾಗಿ ನಡೆದುಕೊಳ್ಳಬೇಕು. ಕೀಳು ಮಟ್ಟದ ಭಾಷೆಯಿಂದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಚಾಟಿ ಬೀಸಿದರು.

ಜೆಡಿಎಸ್​​ ಕಾರ್ಯಕರ್ತರ ಸಭೆಗೆ ಮುನ್ನವೇ ಮಾತಿಗೆ ಸಿಕ್ಕ ಸಿಎಂ, ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಯುತ್ತಿದೆ. ಎಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂದು? ಅಭಿಪ್ರಾಯ ಸಂಗ್ರಹಿಸಿಲು ಕಾರ್ಯಕರ್ಯರ ಸಭೆ ಕರೆದಿದ್ದೇವೆ. ಚಾಮರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಡಬೇಕೆಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಂಡಿಲ್ಲ. ಎರಡು ಪಕ್ಷದವರೂ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಒಡೆಯಲು ಸಿಎಂ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿಂದತೆ ಜೆಡಿಎಸ್​ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ. ಪಕ್ಷದ ಕಾರ್ಯ ಜೊತೆಗೆ ತಮ್ಮ ಮಗನ ಸಿನಿಮಾ ಪ್ರಚಾರದ ಕಾರ್ಯವನ್ನು ಸಿಎಂ ಹಮ್ಮಿಕೊಂಡಿದ್ದಾರೆ. ಈ ಕಾರಣದಿಂದಲೇ ಪುತ್ರ ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಜಾಗ್ವಾರ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಇಲ್ಲಿಯೇ ಮಾಡಿದ್ದೆವು. ಸದ್ಯ ಸೀತಾರಾಮ ಕಲ್ಯಾಣ ಚಿತ್ರದ ಆಡಿಯೋ ರಿಲೀಸ್ ಕೂಡ ಮೈಸೂರಿನಲ್ಲಿಯೇ ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಸಿನಿಮಾ ಪ್ರಚಾರ ಮತ್ತು ಚುನಾವಣೆ ಸಿದ್ದತೆ ಎರಡನ್ನು ಒಟ್ಟಿಗೆ ಮಾಡುತ್ತಿದ್ದೇವೆ ಎಂದು ಸ್ವತಃ ಸಿಎಂ ಕುಮಾರಸ್ವಾಮಿಯವರೇ ಒಪ್ಪಿಕೊಂಡಿದ್ದಾರೆ.

Comments are closed.