ಕರ್ನಾಟಕ

ರಾಜ್ಯ ಹೈಕೋರ್ಟ್ ನಿಂದ ಸರ್ಕಾರಿ ಸೇವೆ ಸಲ್ಲಿಸದ ವೈದ್ಯರಿಗೆ ಶಾಕ್!

Pinterest LinkedIn Tumblr


ಬೆಂಗಳೂರು: ಸರ್ಕಾರಿ ಸೇವೆ ಸಲ್ಲಿಸದ ವೈದ್ಯರಿಂದ ದಂಡ ವಸೂಲಿ ಮಾಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.

ಸರ್ಕಾರಿ ಕೋಟಾದಲ್ಲಿ ಪಿಜಿ, ವೈದ್ಯ ಶಿಕ್ಷಣ ಸೀಟು ಪಡೆದವರು ಸರ್ಕಾರಿ ಸೇವೆ ಸಲ್ಲಿಸದಿದ್ದಲ್ಲಿ, ದಂಡ ವಸೂಲಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಸರ್ಕಾರಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳಿಂದ ವೈದ್ಯಕೀಯ ಶಿಕ್ಷಣ ಮುಗಿದ ಬಳಿಕ, 3 ವರ್ಷ ಸರ್ಕಾರಿ ಸೇವೆ ಕಡ್ಡಾಯ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು.

ಸರ್ಕಾರಿ ಸೇವೆ ಸಲ್ಲಿಸದ ವೈದ್ಯರಿಂದ 25 ರಿಂದ 50 ಲಕ್ಷ ರೂ. ವರೆಗೂ ದಂಡ ವಸೂಲಿ ಮಾಡಬೇಕು ಎಂದು 2006 ರಲ್ಲಿ ಸರ್ಕಾರ ಕಾನೂನು ರೂಪಿಸಿದೆ.

ಸರ್ಕಾರಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ನೂರಾರು ಕೋಟಿ ರೂ. ದಂಡ ವಸೂಲಿ ಮಾಡುವ ಬದಲು ಕೇವಲ 11.89 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು, ಸರ್ಕಾರಿ ಸೀಟು ಪಡೆದ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ.

ಇದೊಂದು ಗಂಭೀರ ಪ್ರಮಾದ ಎಂದು ನ್ಯಾ.ಕೃಷ್ಣ ಎಸ್. ದೀಕ್ಷಿತ್ ಹೇಳಿದ್ದು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

6 ತಿಂಗಳೊಳಗೆ ಈ ಬಗ್ಗೆ ಸಮಗ್ರ ಮಾರ್ಗಸೂಚಿ ರೂಪಿಸಬೇಕು. ಸರ್ಕಾರ ಮತ್ತು ಸಿಎಜಿ ಈ ಬಗ್ಗೆ ಗಮನ ಹರಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

Comments are closed.