ಕರ್ನಾಟಕ

ಸಂಕ್ರಾಂತಿ ಹಬ್ಬಕ್ಕೆ ಕೆಎಸ್ಆರ್​ಟಿಸಿಯಿಂದ ಬಂಪರ್ ಆಫರ್

Pinterest LinkedIn Tumblr


ಬೆಂಗಳೂರು: ಹಬ್ಬಗಳು ಬಂತೆಂದರೆ ಸಾಕು ಬೆಂಗಳೂರಿನಿಂದ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ದುಪ್ಪಟಾಗುತ್ತದೆ. ಅಷ್ಟೇ ಅಲ್ಲದೇ ಈ ವೇಳೆ ಟಿಕೆಟ್​ ದರ ಕೂಡ ಹೆಚ್ಚಳವಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೆಎಸ್​ಆರ್​ಟಿಸಿ ಹೊಸ ಯೋಜನೆ ರೂಪಿಸುವುದರ ಜೊತೆಗೆ ಬಂಪರ್​ ಆಫರ್​ ಕೂಡ ನೀಡಿದೆ.

ಸಂಕ್ರಾಂತಿ ಹಬ್ಬಕ್ಕೆ ವಾರಾಂತ್ಯದಿಂದಲೇ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಜ.11 ಹಾಗೂ 12ರಿಂದಲೇ 500ಕ್ಕೂ ಹೆಚ್ಚುವರಿ ಬಸ್​ಗಳನ್ನು ಬಿಡಲಾಗುತ್ತಿದೆ. ರಾಜ್ಯ ಮತ್ತು ಅಂತರರಾಜ್ಯಗಳಿಗೆ ಈ ಸೇವೆ ಇರಲಿದ್ದು, ಈ ವಿಶೇಷ ವಾಹನ ಸಂಕ್ರಾಂತಿ ವಾಹನಗಳ ವ್ಯವಸ್ಥೆ ಇಲ್ಲ.

ಬುಕಿಂಗ್​ಗಾಗಿ ಈಗಾಗಲೇ 707 ಕಂಪ್ಯೂಟರ್​ ಬುಕಿಂಗ್​ ಕೂಡ ಆರಂಭವಾಗಿದ್ದು,, ನಾಲ್ಕುಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಬುಕಿಂಗ್​ ಮಾಡಿದರೆ ಶೇ.5ರಷ್ಟು ರಿಯಾಯತಿ ಸಿಗಲಿದೆ. ಹೋಗಿ ಬರುವ ಟಿಕೆಟ್​ಗಳನ್ನು ಒಟ್ಟಿಗೆ ಬುಕ್ಕಿಂಗ್​ ಮಾಡಿದರೆ ಶೇ.10ರಷ್ಟು ರಿಯಾಯಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ವೆಬ್​ಸೈಟ್​ಗೆ ಭೇಟಿ ನೀಡಲು ಎಂದು ಕೆಎಸ್​ ಆರ್​ಟಿಸಿ ವ್ಯವಸ್ಥಾಪಕರು ತಿಳಿಸಿದ್ದಾರೆ.

Comments are closed.