ಕರ್ನಾಟಕ

ಹೆಂಡತಿ ಮೇಲೆ ಸಂಶಯ: ಗಂಡನ ಕ್ರೌರ್ಯ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ

Pinterest LinkedIn Tumblr


ಗದಗ: ಹೆಂಡತಿ ಮೇಲೆ ಸಂಶಯ ಮಾಡಿ ಪ್ರತಿನಿತ್ಯ ಜಗಳ ಮಾಡುತ್ತಿದ್ದ ಆರೋಪಿ ಭೀಮಪ್ಪ….! ಗಂಡನ ರೌದ್ರಾವತಾರಕ್ಕೆ ವಿಲ..ವಿಲ.. ಒದ್ದಾಡಿ ಪ್ರಾಣ ಬಿಟ್ಟಿರೋ ಮಹಿಳೆ….! ಅಮ್ಮ ಸತ್ತಿರೋ ವಿಚಾರ ಗೊತ್ತಿದ್ರೂ ಏನಾಗಿದೆ ಅಂತ ಪ್ರಶ್ನೆಯಲ್ಲಿರೋ ಮಕ್ಕಳು….! ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ ಇಲ್ಲಿ ಅದು ಮುಗಿಯೋ ಬದಲು ಕೊಲೆಯಲ್ಲಿ ಅಂತ್ಯವಾಗಿದೆ.

ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಭೀಮಪ್ಪ ಹಾಗೂ ಉಮಾ ದಂಪತಿ, ನಿನ್ನೆ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದಾರೆ. ಆದ್ರೆ ಬೆಳಗ್ಗೆಯೇ ಎದ್ದ ಭೀಮಪ್ಪ ವಟ ವಟ ಅಂತಿದ್ದ ಹೆಂಡತಿಯ ಬಾಯಿನ್ನು ಶಾಶ್ವತವಾಗಿ ಮುಚ್ಚಿಸಿದ್ದಾನೆ. ಭೀಕರವಾಗಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ನರೇಗಲ್ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಭೀಮಪ್ಪನ ರೌದ್ರಾವತಾರಕ್ಕೆ ಪತ್ನಿ ಉಮಾ ರಕ್ತದ ಮಡುವಿನಲ್ಲಿ ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ.

ಮೇಲ್ನೋಟಕ್ಕೆ ಇದು ಕೌಟುಂಬಿಕ ಕಲಹದ ಕೊಲೆ ಎಂದು ಹೇಳಲಾಗ್ತಿತ್ತು. ಆದ್ರೆ ಘಟನೆ ನಂತರ ಎರಡೂ ಕಡೆಯವರ ಸಂಬಂಧಿಗಳು ಬಂದು ಹೇಳಿಕೆ ನೀಡಿದ ನಂತರವಷ್ಟೇ ಇದು ಭೀಮಪ್ಪನ ಅನುಮಾನದ ಬುದ್ದಿಯಿಂದ ನಡೆದ ಕೊಲೆ ಅಂತ ಗೊತ್ತಾಗಿದ್ದು. ಕಳೆದ 12 ವರ್ಷಗಳ ಹಿಂದೆ ಉಮಾ ಜೊತೆ ಮದುವೆಯಾದ ಭೀಮಪ್ಪ ಅಂದಿನಿಂದ್ಲೂ ಸಹ ಉಮಾಳನ್ನು ಅನುಮಾನಿಸ್ತಿದ್ದ. ಆದ್ರೆ ನಿನ್ನೆ ರಾತ್ರಿ ಮತ್ತೆ ಆರಂಭವಾದ ಈ ಗಲಾಟೆ ಈಗ ಉಮಾಳ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಮೊದಲು ಸಹ ಉಮಾಳ ಮೂಗಿಗೆ ಹೊಲಿಗೆ ಬೀಳೋ ಹಾಗೆ ಹೊಡೆದಿದ್ನಂತೆ ಈ ಭೀಮಪ್ಪ. ಅಲ್ಲದೇ, ಭೀಮಪ್ಪ ಇಂದು ನಡೆಸಿದ ಕೃತ್ಯಕ್ಕೆ ಉಮಾ ಹಾಗೂ ಭೀಮಪ್ಪ ದಂಪತಿಗಳ ಮೂರು ಮಕ್ಕಳಾದ 9 ವರ್ಷದ ವೈಷ್ಣವಿ, 5 ವರ್ಷದ ಮಗ ಮಲ್ಲು, ಹಾಗೂ 9 ತಿಂಗಳ ಹಸುಗೂಸು ಶಿಲ್ಪಾ ಅನಾಥವಾಗಿದ್ದಾರೆ.

ಇದನ್ನೂ ಓದಿ: ‘ಜೆಡಿಎಸ್​​ಗೆ 12 ಸೀಟು ಗೆಲ್ಲಿಸಿಕೊಡಿ’ ಎಂದಿದ್ದ ಸಿಎಂ: ಎಚ್​​ಡಿಕೆ ಹೇಳಿಕೆಗೆ ಕಾಂಗ್ರೆಸ್​​ ಆಕ್ರೋಶ; ಇಂಚಿಂಚೂ ಮಾಹಿತಿ ರಾಹುಲ್​​ಗೆ ರವಾನೆ!​

ಭೀಮಪ್ಪ ಉಮಾಳನ್ನು ಮದುವೆಯಾದ ದಿನದಿಂದಲೂ ಆಕೆಯ ನಡತೆ ವಿಚಾರದಲ್ಲಿ ಪ್ರತಿದಿನ ಜನಗಳ ಮಾಡ್ತಿದ್ನಂತೆ. ಪ್ರತಿದಿನ ಕುಡಿದು ಜಗಳ ಮಾಡುತ್ತಿದ್ದ ಭೀಮಪ್ಪನಿಗ ಯಾರಾದ್ರೂ ಸುಮ್ಮನಿರು ಅಂದ್ರೆ, ಅವರಿಗೇ ಬೈದು ಕಳಿಸ್ತಿದ್ನಂತೆ. ಹಲವು ಬಾರಿ ಗ್ರಾಮದ ಹಿರಿಯರು ಇವರ ಜಗಳವನ್ನು ಬಗೆಬಹರಿಸಿ ಕಳಿಸಿದ್ರೂ, ನಾಯಿ ಬಾಲ ನೆಟ್ಟಗಾಗಲ್ಲ ಎನ್ನೋ ಹಾಗೆ ಭೀಮಪ್ಪ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದ್ದಾನೆ. ಈ ಜಗಳ ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಉಮಾಳ ಸಂಬಂಧಿಕರ ಆಕ್ರಂದನವಂತೂ ಮುಗಿಲುಮುಟ್ಟಿತ್ತು.

ಭೀಮಪ್ಪ ತಾನು ಮಾಡಿದ ತಪ್ಪಿನಿಂದಾಗಿ ಈಗ ಶ್ರೀಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ. ಆದ್ರೆ ಏನೂ ಅರಿಯದ ಮಕ್ಕಳು ಮಾತ್ರ ಅಮ್ಮ‌ಈಗ ಬರ್ತಾಳೆ ಆಗ ಬರ್ತಾಳೆ ಅಂತ ಕಾಯ್ತಿವೆ.

Comments are closed.