ಕರ್ನಾಟಕ

ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಪ್ರವೇಶಿಸುವ ಮೊದಲು ಮಡಿಕೇರಿ ಲಾಡ್ಜ್‌ನಲ್ಲಿ ಪೊಲೀಸ್‌ ರಕ್ಷಣೆ ಪಡೆದಿದ್ದ ಬಿಂದು, ಕನಕದುರ್ಗಾ

Pinterest LinkedIn Tumblr


ಮಡಿಕೇರಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ನಿರ್ಬಂಧದ ನಡುವೆಯೂ ಕೇರಳ ಸರಕಾರದ ಬೆಂಬಲದೊಂದಿಗೆ ಬುಧವಾರ ಬೆಳಗ್ಗೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಾದ ಕೇರಳದ ಬಿಂದು ಮತ್ತು ಕನಕದುರ್ಗಾ ಮಡಿಕೇರಿಯ ಲಾಡ್ಜ್‌ನಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ.

ದೇಗುಲಕ್ಕೆ ತೆರಳುವ ಮೊದಲು ಡಿ. 29ರ ಶನಿವಾರ ಕೊಡಗಿನ ವಿರಾಜಪೇಟೆಯ ದೊಡ್ಡೆಟ್ಟಿ ಚೌಕದ ಲಾಡ್ಜ್ ಒಂದರಲ್ಲಿ ಕೇರಳದ ಬಿಂದು, ಕನಕದುರ್ಗಾ ತಂಗಿದ್ದರು ಎನ್ನುವುದು ಖಚಿತವಾಗಿದೆ.

ಮಹಿಳಾ ಪ್ರವೇಶಕ್ಕೆ ಆಕ್ರೋಶ: ಕೇರಳದಾದ್ಯಂತ ಹರತಾಳ, ಭುಗಿಲೆದ್ದ ಹಿಂಸಾಚಾರ

ಶನಿವಾರ ಮಧ್ಯಾಹ್ನ 2.12ಕ್ಕೆ ಕೇರಳದ ಪೊಲೀಸರೇ ಮಫ್ತಿಯಲ್ಲಿ ಬಂದು ಬಿಂದು ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದಾರೆ ಎನ್ನಲಾಗಿದ್ದು, ಡಿ.31ರ ಸೋಮವಾರ ಬೆಳಗ್ಗೆ 10.15ಕ್ಕೆ ರೂಮ್‌ ಖಾಲಿ ಮಾಡಿದ್ದಾರೆ.

ಹೊರಡುವಾಗ ಇಬ್ಬರೂ ಮಹಿಳೆಯರು ಕಪ್ಪು ಬಟ್ಟೆ ಧರಿಸಿ ವಿರಾಜಪೇಟೆಯಿಂದ ತೆರಳಿದ್ದಾರೆ. ಅಲ್ಲದೆ ಲಾಡ್ಜ್‌ನಲ್ಲಿದ್ದ ಸಂದರ್ಭ ಯಾವುದೇ ರೀತಿಯ ವೃತ ಪಾಲಿಸದೆ ಮಾಂಸಾಹಾರ ಸೇವಿಸಿದ್ದರು ಎಂದು ಲಾಡ್ಜ್‌ ಸಿಬ್ಬಂದಿ ಮಾಲೀಕರಿಗೆ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಹರತಾಳ ಪೂರ್ಣ, ಪ್ರತಿಭಟನೆ, ಇರಿತ, ಅಶ್ರುವಾಯು ಪ್ರಯೋಗ

ವೃತ ನಿಯಮ ಪಾಲಿಸದೇ, ದೇಗುಲದ ಪಾವಿತ್ರ್ಯಕ್ಕೆ ಭಂಗ ತರುವ ಉದ್ದೇಶದಿಂದ ಶಬರಿಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು ಮತ್ತು ಅವರಿಗೆ ಭದ್ರತೆ ಮತ್ತು ಪ್ರಚೋದನೆ ನೀಡಿದ ಕೇರಳ ಸರಕಾರ, ಪೊಲೀಸ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಗುರುವಾರ ಕೇರಳದಾದ್ಯಂತ ಹರತಾಳ ನಡೆದಿದೆ.

Comments are closed.