ಕರ್ನಾಟಕ

ಮೈತ್ರಿ ಸರ್ಕಾರದ ಪತನವಾಗುತ್ತದೆ ಎಂದು ಹೇಳುತ್ತಿರುವ ರಾಜ್ಯ ಬಿಜೆಪಿ ನಾಯಕರನ್ನು ಬೀದಿ ನಾಯಿಗೆ ಹೋಲಿಸಿದ ಸಚಿವ ಡಿಸಿ ತಮ್ಮಣ್ಣ

Pinterest LinkedIn Tumblr

ಮಂಡ್ಯ: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ಪತನವಾಗುತ್ತದೆ ಎಂದು ಹೇಳುತ್ತಿರುವ ರಾಜ್ಯ ಬಿಜೆಪಿ ನಾಯಕರನ್ನು ಸಚಿವ ಡಿಸಿ ತಮ್ಮಣ್ಣ ಅವರು ಬೀದಿಗೆ ನಾಯಿಗೆ ಹೋಲಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಮ್ಮಣ್ಣ, ‘ಆನೆ ನಡೆದುಕೊಂಡು ಹೋಗುತ್ತಿದ್ದರೆ, ಮುದಿನಾಯಿಯೊಂದು ಆನೆ ಈಗ ಬೀಳುತ್ತೆ, ಆಗ ಬೀಳುತ್ತೆ ಎಂದು ಕಾಯುತ್ತ ಕುಳಿತ ಹಾಗೇ ರಾಜ್ಯ ಬಿಜೆಪಿ ಮುಖಂಡರು ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಎಂದು ಕಾದು ಕುಳಿತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿಗೆ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು 24 ಗಂಟೆಗಳಲ್ಲಿ ಸಮ್ಮಿಶ್ರ ಸರ್ಕಾರ ನೆಲಕ್ಕಚ್ಚುತ್ತದೆ. ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ. ನಮ್ಮೊಂದಿಗೆ 15 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು.

ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿ ತಮ್ಮಣ್ಣ ಬಿಜೆಪಿಯನ್ನು ನಾಯಿಗೆ ಮತ್ತು ಮೈತ್ರಿ ಸರ್ಕಾರವನ್ನು ಆನೆಗೆ ಹೋಲಿಸಿದ್ದಾರೆ.

ಆನೆ ಈಗ ಬೀಳುತ್ತೆ ಆಗ ಬೀಳುತ್ತೆ ಅಂತ ಮುದಿನಾಯಿ ಕಾಯುತ್ತಿತ್ತು. ಆದರೆ ಅದು ಬೀಳಲಿಲ್ಲ ಬೀದಿ ನಾಯಿ ಜೊಲ್ಲು ಸುರಿಸುವುದನ್ನ ಬಿಡಲಿಲ್ಲ ತಮ್ಮಣ್ಣ ತೀರುಗೇಟು ನೀಡಿದ್ದಾರೆ.

Comments are closed.