ಕರ್ನಾಟಕ

ಕೊನೆಗೂ ಗೃಹ ಖಾತೆ ಬಿಟ್ಟುಕೊಟ್ಟ ಪರಮೇಶ್ವರ್​: ಸಿದ್ದರಾಮಯ್ಯ ಯಶಸ್ವಿ

Pinterest LinkedIn Tumblr


ಬೆಂಗಳೂರು: ಗೃಹ ಖಾತೆಗಾಗಿ ಪಟ್ಟು ಹಿಡಿದಿದ್ದ ಡಿಸಿಎಂ ಕೊನೆಗೂ ತಮ್ಮ ಖಾತೆಯನ್ನು ಬಿಟ್ಟು ಕೊಡಲು ಸಮ್ಮತಿ ಸೂಚಿಸಿದ್ದಾರೆ. ನೂತನವಾಗಿ ಆಯ್ಕೆಯಾದ ಎಂಬಿ ಪಾಟೀಲ್​ ಅವರಿಗೆ ಗೃಹ ಖಾತೆಯನ್ನು ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಈ ಹಿಂದೆ ತಾವು ಕಾರ್ಯನಿರ್ವಹಿಸಿದ ಜಲಸಂಪನ್ಮೂಲ ಖಾತೆಯನ್ನೇ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಖಾತೆ ಸದ್ಯ ಡಿಕೆ ಶಿವಕುಮಾರ್​ ಅವರ ಬಳಿಯಿದ್ದು, ಗೃಹ ಖಾತೆಯನ್ನು ನೀಡುವುದಾಗಿ ಕೈ ಮುಖಂಡರು ತಿಳಿಸಿದ್ದರು. ಆದರೆ ಇದಕ್ಕೆ ಎಂಬಿ ಪಾಟೀಲ್​ ಸಮ್ಮತಿ ನೀಡಿರಲಿಲ್ಲ. ಅಲ್ಲದೇ ಪರಮೇಶ್ವರ್​ ಕೂಡ ಪ್ರಭಾವಿ ಖಾತೆಯಾದ ಗೃಹ ಖಾತೆಯನ್ನು ಬಿಟ್ಟು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ.

ಇದೆ ಗೃಹ ಖಾತೆಗಾಗಿ ಈ ಹಿಂದೆ ಪರಮೇಶ್ವರ್​ ಲಾಬಿ ಮಾಡಿದ್ದರು. ಈಗ ಆ ಖಾತೆಯನ್ನು ಬಿಟ್ಟು ಕೊಡಲು ಅವರು ಸಿದ್ದರಿರಲಿಲ್ಲ. ಆದರೆ ಬಂಡಾಯ ಶಾಸಕರ ನಡುವಳಿಕೆ ಹಾಗೂ ಮೈತ್ರಿ ಸರ್ಕಾರದ ಸ್ಥಿತಿಗತಿಗಳ ಕುರಿತು ಸಿದ್ದರಾಮಯ್ಯ ಇಬ್ಬರು ಮುಖಂಡರ ಮನವೊಲಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಅನಿವಾರ್ಯ. ನಮಗೆ ಲಭ್ಯವಿರುವ ಖಾತೆಯಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ ಡಿಸಿಎಂ ಪಟ್ಟ ಇರುವುದರಿಂದ ಗೃಹ ಖಾತೆ ಇಲ್ಲದಿದ್ದರು ನಿಮಗೆ ಮಹತ್ವ ವಿರುತ್ತದೆ ಈ ಹಿನ್ನಲೆಯಲ್ಲಿ ಖಾತೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಪರಮೇಶ್ವರ್​ಗೆ ತಿಳಿ ಹೇಳಿದರು.

ಅದೇ ರೀತಿ ಎಂಬಿ ಪಾಟೀಲ್​ಗೂ ವಾಸ್ತವತೆ ವಿವರಿಸಿ ಅವರಿಗೆ ಗೃಹ ಖಾತೆ ವಹಿಸಿಕೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

Comments are closed.