ಕರ್ನಾಟಕ

ನಿಶ್ಚಿತಾರ್ಥದ ಬಳಿಕ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾದ ಯುವತಿ; ಕೈಕೊಟ್ಟು ಓಡಿಹೋದ ಪ್ರೇಮಿಗಾಗಿ ಹುಡುಕುತ್ತಿರುವ ಯುವತಿ

Pinterest LinkedIn Tumblr

ಹಾಸನ: ಪೋಷಕರು ನೋಡಿದ ವರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾಗಿದ್ದ ನವವಧುವಿಗೆ ತಾಳಿ ಕಟ್ಟಿದ್ದ ಪ್ರೇಮಿ ಕೈಕೊಟ್ಟು ದುಬೈಗೆ ಓಡಿ ಹೋಗಿದ್ದು, ಅತ್ತ ನಿಶ್ಚಿತಾರ್ಥವೂ ಮುರಿದುಬಿದ್ದಿದ್ದು, ಹುಡುಗಿಯ ಪರಿಸ್ಥಿತಿ ನರಕ ಮಯವಾಗಿದೆ.

ಹಾಸನದ ಆಲೂರು ತಾಲೂಕಿನ ಕಾಡ್ಲೂರು ಗ್ರಾಮದ ಹಿತನ್ ಎಂಬಾತ ತನ್ನ ಮನೆಯ ಪಕ್ಕದಲ್ಲಿದ್ದ ಹುಡುಗಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ನಂತರ ಆಕೆಯ ನಿಶ್ಚಿತಾರ್ಥ ನಡೆದ ನಂತರ ಆಕೆಯನ್ನು ನವೆಂಬರ್ 18ರಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅರಶಿನ ಕೊನೆ ಕಟ್ಟಿ ವಿವಾಹವಾಗಿದ್ದಾನೆ.

ಬಳಿಕ ತನ್ನ ಮದುವೆ ವಿಚಾರ ಮನೆಗೆ ಗೊತ್ತಾದ ನಂತರ ಆತ ಯುವತಿಗೆ ನನಗೆ ದುಬೈನಲ್ಲಿ ಕೆಲಸ ಸಿಕ್ಕಿದೆ ಅಂತ ಹೇಳಿ ಪರಾರಿಯಾಗಿದ್ದಾನೆ. ಇದೀಗ ಯಾರ ಸಂಪರ್ಕಕ್ಕೂ ಸಿಗದೆ ಇರುವುದರಿಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ನಿಶ್ಚಿತಾರ್ಥ ಮಾಡಿಕೊಂಡಿದ್ದವರಿಗೆ ಯುವತಿ ಗುಟ್ಟಾಗಿ ಮದುವೆಯಾಗಿರುವ ವಿಚಾರ ತಿಳಿದು ಮದುವೆಯನ್ನು ನಿಲ್ಲಿಸಿದ್ದಾರೆ. ಇದರಿಂದ ಸಹಜವಾಗಿಯೇ ಕಂಗಾಲಾಗಿರುವ ಲಾವಣ್ಯ ಹಾಗೂ ಪೋಷಕರು, ನಮಗೆ ನ್ಯಾಯಬೇಕು. ಮಗಳಿಗೆ ಮಹಾಮೋಸ ಮಾಡಿರುವ ಹಿತನ್ ಮರಳಿ ಬಂದು ಬಾಳು ಕೊಡಬೇಕು ಎಂದು ಮನವಿ ಮಾಡಿದ್ದಾರೆ.

Comments are closed.