ಕರ್ನಾಟಕ

ವಿಷ ಪ್ರಸಾದ: ಸ್ವಾಮೀಜಿ, ಅಂಬಿಕಾ ವಾಟ್ಸಾಪ್‌ ಕಾಮಕೇಳಿ!

Pinterest LinkedIn Tumblr

ಚಾಮರಾಜನಗರ: ಸುಳ್ವಾಡಿಯ ವಿಷ ಪ್ರಸಾದದ ಪ್ರಮುಖ ಆರೋಪಿ ಅಂಬಿಕಾಗೆ ಸಾಲೂರು ಮಠದ ಕಿರಿಯ ಸ್ವಾಮೀಜಿ ಮಹದೇವಸ್ವಾಮಿ ವಾಟ್ಸ್‌ಆ್ಯಪ್‌, ಎಸ್‌ಎಂಎಸ್‌ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮದುವೆಯಾಗಿರುವ ಅಂಬಿಕಾ ಮತ್ತು ಸ್ವಾಮೀಜಿ ನಡುವೆ ಬಹಳ ವರ್ಷಗಳಿಂದ ಅನೈತಿಕ ಸಂಬಂಧ ಇರುವುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿತ್ತು. ಇದೀಗ ಅಶ್ಲೀಲ ಸಂದೇಶಗಳು ವಿನಿಮಯ ಆಗುತ್ತಿದ್ದವು ಅನ್ನುವುದು ಬೆಳಕಿಗೆ ಬಂದಿದೆ.

ಹನೂರು ತಾಲೂಕಿನ ಶಾಗ್ಯ ಗ್ರಾಮದ ಮಹದೇವಸ್ವಾಮಿ ಬಹಳ ಕಸರತ್ತು ನಡೆಸಿ, ಮಹದೇಶ್ವರ ಬೆಟ್ಟದ ಸಾಲೂರು ಮಠದ ಎರಡನೇ ಸ್ವಾಮೀಜಿಯಾಗಿ ಪಟ್ಟಕ್ಕೇರಿದ್ದರು. ಅಂಬಿಕಾ ಶಾಗ್ಯ ಗ್ರಾಮದವಳೇ ಆಗಿದ್ದು, ಇಬ್ಬರ ನಡುವೆ ಹಿಂದಿನಿಂದಲೂ ಅನೈತಿಕ ಸಂಬಂಧ ಬೆಳೆದಿತ್ತು. ಇದು, ಇಲ್ಲಿಯ ಗ್ರಾಮಸ್ಥರಿಗೂ ತಿಳಿದಿತ್ತು. ಆದರೆ, ಯಾರೂ ಅವರ ತಂಟೆಗೆ ಹೋಗುತ್ತಿರಲಿಲ್ಲ. ಅಂಬಿಕಾಗೆ ಮಾರ್ಟಳ್ಳಿಯಲ್ಲಿ ಸ್ವಾಮೀಜಿಯೇ ಮನೆ ಕಟ್ಟಿಸಿಕೊಟ್ಟಿದ್ದು, ಆಗಾಗ ಆ ಮನೆಗೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಪೊಲೀಸರು ಕಸ್ಟಡಿಗೆ ಪಡೆದ ಬಳಿಕ ಆರೋಪಿ ಸ್ವಾಮೀಜಿ ಎಲ್ಲಾ ವಿಷಯವನ್ನು ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದ್ದು, ಒಂದೊಂದೇ ವಿಷಯಗಳು ಹೊರಬರುತ್ತಿವೆ.

Comments are closed.