ಕರ್ನಾಟಕ

ಸಚಿವ ಸ್ಥಾನ ನೀಡುವ ಕುರಿತು ಕಾಂಗ್ರೆಸ್​ ನಾಯಕರ ಚರ್ಚೆ; 8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ

Pinterest LinkedIn Tumblr


ನವದೆಹಲಿ: ಬಹುನಿರೀಕ್ಷಿಯ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದೆ. ನಾಳೆ ಯಾವ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಸಚಿವರ ಆಯ್ಕೆಗಾಗಿ ದೆಹಲಿಗೆ ತೆರಳಿರುವ ರಾಜ್ಯ ಕಾಂಗ್ರೆಸ್​ ನಾಯಕರು ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸುವ ತಯಾರಿ ನಡೆಸುತ್ತಿದ್ದು, ಇಂದು ಸಂಜೆ ರಾಹುಲ್​ ಗಾಂಧಿ ಜೊತೆಗೆ ಸಭೆ ನಡೆಸಿ, ಹೈಕಮಾಂಡ್​ನಿಂದ ಒಪ್ಪಿಗೆ ಪಡೆಯಲಿದ್ದಾರೆ.

ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದು, ಸಚಿವಕಾಂಕ್ಚಿಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಲಿಂಗಾಯತ, ಕುರುಬ, ಮುಸ್ಲಿಂ, ಎಸ್ ಟಿ ಸಮುದಾಯಗಳಿಗೆ ಇನ್ನೊಂದು ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಲಿಂಗಾಯತ ಸಮುದಾಯದ ಪೈಕಿ ಎಂ.ಬಿ. ಪಾಟೀಲ್- ಬಿ.ಸಿ. ಪಾಟೀಲ್ ಹೆಸರು ಪ್ರಸ್ತಾಪಿಸಲಾಗಿದೆ. ಕುರುಬ ಸಮುದಾಯದ ಪೈಕಿ ಎಂಟಿಬಿ ನಟರಾಜ್ ಮತ್ತು ಶಿವಳ್ಳಿ ಅವರ ಹೆಸರನ್ನು ಚರ್ಚಿಸಲಾಗಿದೆ. ಹಾಲಿ ಸಚಿವ ಶಂಕರ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿದ್ದು, ಹಾಗೇನಾದರೂ ಶಂಕರ್ ಕೈಬಿಟ್ಟರೆ ಎಂಟಿಬಿ ನಟರಾಜ್, ಶಿವಳ್ಳಿ ಇಬ್ಬರಿಗೂ ಅವಕಾಶ ಸಿಗಲಿದೆ.

ಮುಸ್ಲಿಂ ಸಮುದಾಯದಿಂದ ರಹೀಂ ಖಾನ್ ಹೆಸರು ಬಹುತೇಕ ಅಂತಿಮವಾಗಿದ್ದು, ಅವರು ಸಚಿವರಾಗುವುದು ನಿಕ್ಕಿಯಾಗಿದೆ. ಎಸ್ ಟಿ ಸಮುದಾಯದ ಪೈಕಿ ಇ.ತುಕಾರಾಂ ಮತ್ತು ರಘುಮೂರ್ತಿ ಹೆಸರನ್ನು ಪ್ರಸ್ತಾಪಿಸಲಾಗಿದೆ. ರಮೇಶ್ ಜಾರಕಿಹೊಳಿ ಬದಲಿಗೆ ಸತೀಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಲಂಬಾಣಿ ಸಮುದಾಯದ ಪೈಕಿ ಭೀಮಾನಾಯಕ್, ಉಮೇಶ್ ಜಾಧವ್ ಹೆಸರು ಮುನ್ನೆಲೆಗೆ ಬಂದಿದೆ.

 

…………………………..

8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವಾಗಿದ್ದ ಕರ್ನಾಟಕ ಮೈತ್ರಿ ಸರ್ಕಾರ ಸಚಿವ ಸಂಪುಟ ಪುನಾರಚನೆಗೆ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಇಂದು [ಶುಕ್ರವಾರ] ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಿದ್ದು, ನೂತನ ಸಚಿವರ ಪಟ್ಟಿಗೆ ರಾಹುಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಇಬ್ಬರು ಹಾಲಿ ಸಚಿವರಿಗೆ ಕೊಕ್ ಕೊಟ್ಟು, 8 ಶಾಸಕರಿಗೆ ಮಂತ್ರಿಗಿರಿ ನೀಡಲು ತೀರ್ಮಾನಿಸಲಾಗಿದೆ. ಇನ್ನು ಮಂತ್ರಿ ಆಕಾಂಕ್ಷಿಗಳಿಗೆ ನಿಗಮ ಮಂಡಳಿ ನೀಡಿ ಸಮಧಾನ ಪಡಿಸಲು ನಿರ್ಧರಿಸಿದ್ದಾರೆ.

ಯಾರಿಗೆ ಮಂತ್ರಿ ಚಾನ್ಸ್..?

ಹಾಲಿ ಸಚಿವರಾದ ರಮೇಶ್ ಜಾರಕಿಹೊಳಿ ಹಾಗೂ ಆರ್. ಶಂಕರ್ ಗೆ ಕೊಕ್ ನೀಡಲಾಗಿದ್ದು, ಸತೀಶ್ ಜಾರಕಿಹೊಳಿ, ಆರ್.ಬಿ.ತಿಮ್ಮಾಪುರ, ಸಿ.ಎಸ್.ಶಿವಳ್ಳಿ, ಇ.ತುಕಾರಾಂ, ಎಂ.ಟಿ.ಬಿ.ನಾಗರಾಜ್, ರಹೀಂಖಾನ್, ಪಿ.ಟಿ.ಪರಮೇಶ್ವರ್ ನಾಯ್ಕ್ ಮತ್ತು ಎಂ.ಬಿ.ಪಾಟೀಲ್ ಗೆ ಮಂತ್ರಿ ಸೀಟು ಪಕ್ಕಾ ಆಗಿದೆ.

ನಿಗಮ ಮಂಡಳಿಗೆ 20 ಶಾಸಕರು ಫೈನಲ್

ನೂತನ ಸಚಿವರ ಪಟ್ಟಿ ಜೊತೆ 20 ಶಾಸಕರ ಹೆಸರುಗಳು ನಿಗಮ ಮಂಡಳಿಗೆ ಫೈನಲ್ ಮಾಡಲಾಗಿದೆ. ಬಿಡಿಎ ಅಧ್ಯಕ್ಷರಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ಶಾಸಕ ಡಾ.ಸುಧಾಕರ್, ಕರ್ನಾಟಕ ಭೂಸೇನಾ ನಿಗಮದ ಹುದ್ದೆಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಅಂತಿಮಗೊಳಿಸಿದ್ದಾರೆ.

ಇನ್ನು ನಾರಾಯಣ್ ರಾವ್, ಉಮೇಶ್ ಜಾಧವ್, ಎಸ್.ಟಿ.ಸೋಮಶೇಖರ್, ಮುನಿರತ್ನ, ಅಬ್ಬಯ್ಯ ಪ್ರಸಾದ್, ನರೇಂದ್ರ, ಎನ್.ಎ.ಹ್ಯಾರಿಸ್, ಸಂಗಮೇಶ್ ಸೇರಿದಂತೆ ನಿಗಮ ಮಂಡಳಿಗೆ 20 ಶಾಸಕರುಗಳ ಹೆಸರುಗಳನ್ನು ಫೈನಲ್ ಮಾಡಲಾಗಿದೆ.

ಮಹಿಳಾ ಶಾಸರುಗಳಿಗೆ ಹುದ್ದೆ ಭಾಗ್ಯ
ಮೂವರು ಮಹಿಳಾ ಶಾಸಕಿಯರಾದ ರೂಪಾ ಶಶಿಧರ್, ಸೌಮ್ಯಾ ರೆಡ್ಡಿ ಮತ್ತು ಅಂಜಲಿ ನಿಂಬಾಳ್ಕರ್ ಸೇರಿದಂತೆ ಒಟ್ಟು 7 ಜನರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಇನ್ನು ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್ ಗೆ ದೆಹಲಿ ವಿಶೇಷ ಪ್ರತಿನಿಧಿ, ಹಾಗೂ ಸಂಸದ ವಿ ಮುನಿಯಪ್ಪಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನ ಮಾಡಲಾಗಿದೆ.

Comments are closed.