ಕರ್ನಾಟಕ

ರಾಷ್ಟ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಬಿಜೆಪಿಯ ಭದ್ರಕೋಟೆಯಾಗಿದ್ದ ರಾಜಸ್ಥಾನ, ಛತ್ತೀಸ್​ಗಢದಲ್ಲಿ ಕಮಲ ಮುದುಡಿದ್ದು, ಮಧ್ಯಪ್ರದೇಶದಲ್ಲಿ ಕೂಡ ಕಾಂಗ್ರೆಸ್​ ಮುನ್ನಡೆ ಕಾಯ್ದುಗೊಂಡಿದೆ.

ಮಿಜೋರಾಂ ಹೊರತು ಪಡಿಸಿದರೆ ಉಳಿದ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಚುನಾವಣಾ ಫಲಿತಾಂಶ ಕಾಂಗ್ರೆಸ್​ ನಾಯಕರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಈ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇದು ಬದಲಾವಣೆಯ ಗಾಳಿ ಎಂದಿದ್ದಾರೆ.

ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ. ಇದು ಗೆದ್ದು ಬೀಗುವ ಸಮಯ ಅಲ್ಲ. ಸೈದ್ಧಾಂತಿಕವಾಗಿ ಗಟ್ಟಿಗೊಂಡು ನೆಲದಲ್ಲಿ ಕಾಲೂರಿ ಹೋರಾಟದಲ್ಲಿ ತೊಡಗಬೇಕಾದ ಕಾಲ.

ಮೋದಿ ಸರ್ಕಾರ ಕೇವಲ ಪ್ರಚಾರದ ಮೂಲಕ ಜನರನ್ನು ಸೆಳೆಯಲು ಮುಂದಾಗಿದೆ. ಆದರೆ, ಜನಕ್ಕೆ ವಾಸ್ತವತೆ ಅರಿವಾಗಿದೆ. ಪ್ರಚಾರಕ್ಕಿಂತ ದೇಶದ ಅಭಿವೃದ್ಧಿ. ಸೈದ್ಧಾಂತಿಕ ನೆಲೆಗಳು ಮುಖ್ಯ. ಕೇವಲ ಹಿಂದೂತ್ವ, ರಾಮಮಂದಿರದಂತಂಹ ಹೋರಾಟಗಳಿಂದ ಜನರನ್ನು ವಂಚಿಸಲು ಸಾಧ್ಯವಿಲ್ಲ. ಇದು ಒಂದು ರೀತಿಯ ಸೈಂದ್ಧಾಂತಿಕತೆಯ ಗೆಲುವಾಗಿದೆ ಎಂದು ಚುನಾವಣಾ ಫಲಿತಾಂಶದ ಕುರಿತು ವಿಶ್ಲೇಷಣೆ ನಡೆಸಿದ್ದಾರೆ.

ಇನ್ನು ಐದು ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಈ ಐದು ರಾಜ್ಯಗಳ ಗೆಲುವಿನಿಂದ ಯಾವುದೇ ಕಾರಣಕ್ಕೂ ಮೈ ಮರೆಯಬಾರದು. ಇದು ನಮ್ಮ ಅಂತಿಮ ಗೆಲುವಲ್ಲ. ಈ ಸಮಯದಲ್ಲಿ ನಾವು ಸೈದ್ಧಾಂತಿಕವಾಗಿ ಗಟ್ಟಿಗೊಂಡು ಹೋರಾಟದಲ್ಲಿ ನೆಲೆಯೂರಬೇಕು ಎಂದು ಕರೆ ನೀಡಿದ್ದಾರೆ.

ಪ್ರಧಾನಿ ವಿರುದ್ಧ ಸದಾ ವಾಗ್ದಾಳಿ ನಡೆಸುವ ಮಾಜಿ ಸಿಎಂ ಸಿದ್ದರಾಮಯ್ಯ, ಮೋದಿ ಒಬ್ಬ ಭ್ರಷ್ಟಚಾರ. ಸದಾ ಸುಳ್ಳು ಹೇಳಿ ಜನರನ್ನು ವಂಚಿಸುವ ಭ್ರಷ್ಟ ಅಧಿಕಾರಿ. ಮೋದಿ ಹೇಳಿದ ಅಚ್ಛೇ ದಿನ್​ ಐದು ವರ್ಷದಲ್ಲಿ ಬರಲೇ ಇಲ್ಲ ಎಂದು ಬಹಿರಂಗವಾಗಿ ಅನೇಕ ಬಾರಿ ಟೀಕಿಸಿದ್ದರು.

Comments are closed.