ಕರ್ನಾಟಕ

ಮದುವೆಯಾಗುವ ಆಮಿಷವೊಡ್ಡಿ ವೈದ್ಯೆಯ ಮೇಲೆ ಅತ್ಯಾಚಾರ

Pinterest LinkedIn Tumblr


ಬೆಂಗಳೂರು: ಮದುವೆಯಾಗುವ ಆಮಿಷವೊಡ್ಡಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ.

ಮ್ಯಾಟ್ರಿಮೋನಿ ಮೂಲಕ ದಾವಣಗೆರೆ ಮೂಲದ ವೈದ್ಯೆಯನ್ನು ಪರಿಚಯ ಮಾಡಿಕೊಂಡ ರಾಮಮೂರ್ತಿ ಎಂಬಾತ ಆಕೆಯ ವಿಶ್ವಾಸ ಗಳಿಸಿಕೊಂಡು ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದ. ಮ್ಯಾಟ್ರಿಮೋನಿಯಲ್ಲಿ ಮದುವೆಯ ಮಾಹಿತಿ ನೀಡಿದ್ದ ವೈದ್ಯೆಯನ್ನು ನಂಬಿಸಿದ ರಾಮಮೂರ್ತಿ ನವೆಂಬರ್ 30ರಂದು ಫೋರಂ ಮಾಲ್​ನಲ್ಲಿ ಆ ವೈದ್ಯೆಯನ್ನು ಭೇಟಿ ಮಾಡಿದ್ದ. ಮದುವೆಯಾಗಲು ಆಸಕ್ತಿ ಇರುವುದಾಗಿಯೂ ಹೇಳಿದ್ದ.

ಆಕೆಯನ್ನು ಮೊದಲ ಬಾರಿಗೆ ಭೇಟಿಯಾದಾಗ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದ. ನಿಮ್ಮವರಿಗೆ ಯಾರಿಗಾದರೂ ಕೆಲಸ ಬೇಕಿದ್ದರೆ ಹೇಳಿ, ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ. ಆತನ ಮಾತನ್ನು ನಂಬಿದ ವೈದ್ಯೆ ತನ್ನ ಸಂಬಂಧಿಕರಿಗೆ ಕೆಲಸ ಕೊಡಿಸಿ ಎಂದು 22 ಲಕ್ಷ ಹಣ ಕೊಡಿಸಿದ್ದಳು. ಲಂಚ ನೀಡಲೆಂದು ವೈದ್ಯೆಯ ಬಳಿಯೂ 4 ಲಕ್ಷ ಹಣ ಪಡೆದುಕೊಂಡಿದ್ದ. ಬಳಿಕ, ಆ ವೈದ್ಯೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದ.

ರಾಮಮೂರ್ತಿಯನ್ನು ಸಂಪೂರ್ಣವಾಗಿ ನಂಬಿದ್ದ ವೈದ್ಯೆಯನ್ನು ನವೆಂಬರ್​ 22ರಂದು ಶೇಷಾದ್ರಿಪುರಂ ರಿಜಿಸ್ಟರ್ ಆಫೀಸಲ್ಲಿ ಮದುವೆಯಾಗುವುದಾಗಿ ದಿನಾಂಕ ನಿಗದಿ ಮಾಡಲಾಗಿತ್ತು. ನ. 20ರಂದು ಹೋಟೆಲ್ ಒಂದರಲ್ಲಿ ವೈದ್ಯೆಯನ್ನು ಭೇಟಿಯಾಗಿದ್ದ ರಾಮಮೂರ್ತಿ ಬಳಿಕ ಸಬ್ ರಿಜಿಸ್ಟರ್ ಕಚೇರಿಗೆ ಬಾರದೆ ಎಸ್ಕೇಪ್ ಆಗಿದ್ದ. ಸದ್ಯ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ವೈದ್ಯೆ ಅತ್ಯಾಚಾರ ದೂರು ದಾಖಲಿಸಿದ್ದಾರೆ.

Comments are closed.