ಕರ್ನಾಟಕ

ಮಂಡ್ಯ ಬಸ್ ದುರಂತ: ಬಸ್ ಕಂಡಕ್ಟರ್ ಬಂಧನ; ಇನ್ನೂ ಸಿಗದ ಚಾಲಕ

Pinterest LinkedIn Tumblr

ಮಂಡ್ಯ: ನಾಲೆಗೆ ಬಸ್ ಬಿದ್ದು 30 ಮಂದಿ ಪ್ರಾಣ ಬಲಿ ತೆಗೆದುಕೊಂಡ ಬಸ್ ನಿರ್ವಾಹಕನನ್ನು ಬಂಧಿಸಿರುವ ಪೊಲೀಸರು ಚಾಲಕನಿಗಾಗಿ ಇನ್ನೂ ಶೋಧ ನಡೆಸುತ್ತಿದ್ದಾರೆ. ಶನಿವಾರ ವಿಶ್ವೇಶ್ವರಯ್ಯ ನಾಲೆಗೆ ಬಸ್ ಉರುಳಿ ಬಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪಾಂಡವಪುರ ಪೊಲೀಸರು ಬಸ್ ಕಂಡಕ್ಟರ್ ನನ್ನು ಬಂಧಿಸಿದ್ದಾರೆ.

ಮಲ್ಲನಾಯಕನಕಟ್ಟೆಯ ಶಿವಪ್ಪ ಮತ್ತು ಮಹದೇವ ಬಸ್ ಚಾಲಕ ಎಂದು ಗುರುತಿಸಲಾಗಿದೆ, ನಾಲೆಗೆ ಬಸ್ ಬೀಳುವ ಮುನ್ನವೇ ಚಾಲಕ ಮತ್ತು ನಿರ್ವಾಹಕ ಬಸ್ ನಿಂದ ಜಿಗಿದಿದ್ದರು. ಬಸ್ ಕಂಡಕ್ಟರ್ ತಾಂಡವ ಎಂದು ಗುರುತಿಸಲಾಗಿದೆ, ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬಸ್ ಕಾಲುವೆಗೆ ಬಿದ್ದ ಕೂಡಲೇ ಚಾಲಕ ಮತ್ತು ಕಂಡಕ್ಟರ್ ಬಸ್ ನಿಂದ ಹಬೊರಗೆ ಬಂದು ಸಹಾಯಕ್ಕಾಗಿ ಕೂಗಿಕೊಂಡಿದ್ದಾಗಿ ಹೇಳಿದ್ದಾನೆ, ಇನ್ನೂ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ತಲಾ 5 ಲಕ್ಷ ರು ಪರಿಹಾರ ಘೋಷಿಸಿದ್ದಾರೆ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಸಂತ್ರಸ್ತರ ಮನೆಗೆ ತೆರಳಿ ಸಂಬಂದ ಪಟ್ಟವರಿಗೆ ಪರಿಹಾರ ಹಣ ನೀಡಲು ತಯಾರಿ ನಡೆಸುತ್ತಿದ್ದಾರೆ, ಇದಕ್ಕಾಗಿ ಸರ್ಕಾರ 1.5 ಕೋಟಿ ರು ಹಣ ಬಿಡುಗಡೆ ಮಾಡಲಾಗಿದೆ.

ಇನ್ನೂ ಬಸ್ ಕಾಲುವೆಗೆ ಬೀಳಲು ನಿಜವಾದ ಕಾರಣ ಏನು ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಅಪಘಾತಕ್ಕೆ ಕಾರಣ ಏನು ಎಂಬುದರ ಬಗ್ಗೆ ವರದಿ ನೀಡಬೇಕಿದೆ.ಬ್ರೇಕ್ ಫೈಲ್ಯೂರ್ ಅಥವಾ ಸ್ಟೇರಿಂಗ್ ಲಾಕ್ ಆಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Comments are closed.