ರಾಷ್ಟ್ರೀಯ

ಚಪ್ಪಲಿ ಕಳೆದುಹೋಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟ ವ್ಯಕ್ತಿ!

Pinterest LinkedIn Tumblr

ಚೆನ್ನೈ: 800 ರುಪಾಯಿ ಮುಖ ಬೆಲೆಯ ಚಪ್ಪಲಿ ಕಳೆದುಕೊಂಡ ವ್ಯಕ್ತಿಯೊರ್ವ ಚೆನ್ನೈನ ಟೊಂಡಿಯಾರ್ ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೇರಿಂಗ್ ಶಾಪ್ ನಡೆಸುವ ರಾಜೇಶ್ ಗುಪ್ತಾ ಎಂಬುವರು ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಖಾಸಗಿ ಮೆಡಿಕಲ್ ಲ್ಯಾಬ್ ನಲ್ಲಿ ರಕ್ತ ಪರೀಕ್ಷೆಗಾಗಿ ತೆರಳಿದ್ದರು. ಲ್ಯಾಬ್ ಹೊರಗೆ ಚಪ್ಪಲಿ ಬಿಟ್ಟು ಒಳ ಹೋಗಿದ್ದ ರಾಜೇಶ್ ಹೊರಬರುವಷ್ಟರಲ್ಲಿ ಚಪ್ಪಲಿ ಕಾಣೆಯಾಗಿದೆ.

ಇದರಿಂದ ಬೇಸರಗೊಂಡ ರಾಜೇಶ್ ಗುಪ್ತಾ ಅವರು ಪೊಲೀಸ್ ಠಾಣೆಗೆ ತೆರಳಿ 800 ರುಪಾಯಿ ಮುಖಬೆಲೆಯ ಚಪ್ಪಲಿ ಕಳುವಾಗಿದ್ದು ಎರಡು ದಿನಗಳ ಹಿಂದಷ್ಟೇ ತಾವು ಚಪ್ಪಲಿಯನ್ನು ಕೊಂಡಿದ್ದಾಗಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲ್ಯಾಬ್ ಗೆ ತೆರಳಿ ಸಿಸಿಟಿವಿ ದೃಶ್ಯಗಳನ್ನು ಪಡೆಯಲು ಮುಂದಾಗಿದ್ದಾರೆ.

Comments are closed.