ಕರ್ನಾಟಕ

30ಕ್ಕೂ ಹೆಚ್ಚು ಜನರ ಬಲಿ ಪಡೆದ ಮಂಡ್ಯ ಬಸ್ ದುರಂತಕ್ಕೆ ಕಾರಣ ಸ್ಟೇರಿಂಗ್ ಲಾಕ್?

Pinterest LinkedIn Tumblr

ಮಂಡ್ಯ: ಜಿಲ್ಲೆಯ ಪಂಡಾವಪುರ ಬಳಿಕ ನಡೆದ ಭೀಕರ ಬಸ್ ದುರಂತ ಸಂಭವಿಸಿದ್ದು, ಸುಮಾರು 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತಕ್ಕೆ ಸ್ಟೇರಿಂಗ್ ಲಾಕ್ ಆಗಿದ್ದೆ ಕಾರಣ ಎನ್ನಲಾಗುತ್ತಿದೆ.

ಇಂದು ಮಧ್ಯಾಹ್ನ ಕೆಎ-19, 5676 ನೊಂದಣಿ ಸಂಖ್ಯೆಯ ಪಂಚಲಿಂಗೇಶ್ವರ ಬಸ್ ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿತ್ತು. ಈ ವೇಳೆ ಚಿಕ್ಕಬ್ಯಾಡರಹಳ್ಳಿ-ಕನಗನಮರಡಿ ಮಾರ್ಗದಲ್ಲಿ ಹೋಗುತ್ತಿದ್ದಂತೆ ವಿ.ಸಿ ನಾಲೆಗೆ ನೇರವಾಗಿ ಬಸ್ ಮುಳುಗಿತ್ತು. ಪರಿಣಾಮ ಬಸ್ಸಿನಿಂದ ಹೊರಬರಲಾಗದೇ ಪ್ರಯಾಣಿಕರು ಪರದಾಡಿ ಜಲಸಮಾಧಿಯಾಗಿದ್ದಾರೆ.

ಇನ್ನೂ ಅಪಘಾತದಲ್ಲಿ ಗಿರೀಶ್ ಮತ್ತು ಬಾಲಕ ಲೋಹಿತ್ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಸ್ಥಳದಲ್ಲಿದ್ದವರು ಅಪಘಾತ ಬಗ್ಗೆ ಮಾತನಾಡಿದ್ದು, ಈ ಮಾರ್ಗದಲ್ಲಿ ಅಪಘಾತ ಸಂಭವಿಸಿರಲಿಲ್ಲ. ರಸ್ತೆಯೂ ಕೂಡ ದೊಡ್ಡದಾಗಿತ್ತು. ಯಾವುದೇ ತಿರುವು ಕೂಡ ಇರಲಿಲ್ಲ. ಬಸ್ ವಿಸಿ ನಾಲೆಯ ಬಳಿ ಬರುತ್ತಿದ್ದಂತೆ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ, ಆತನ ಅಜಾಗರುಕತೆಯಿಂದ ಬಸ್ ನಾಲೆಗೆ ಬಿದ್ದಿದೆ ಎನ್ನಲಾಗುತ್ತಿದೆ.

Comments are closed.