ಕರ್ನಾಟಕ

ಜನಾರ್ದನ ರೆಡ್ಡಿ ಆಪ್ತ ಆಲಿಖಾನ್​ಗೆ 8 ದಿನಗಳ ಪೊಲೀಸ್​ ಕಸ್ಟಡಿ

Pinterest LinkedIn Tumblr


ಬೆಂಗಳೂರು: ನ್ಯಾಯಾಂಗ ಬಂಧನದಲ್ಲಿದ್ದ ಜನಾರ್ದನ ರೆಡ್ಡಿ ಆಪ್ತ ಆಲಿಖಾನ್​ನ್ನು ಮ್ಯಾಜಿಸ್ಟ್ರೇಟ್​ ನ್ಯಾಯಾಲಯ​ 8 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ. ಆಲಿಖಾನ್​ ಮೇಲೆ ಯಾವುದೇ ದೌರ್ಜನ್ಯ ಎಸಗುವಂತಿಲ್ಲ, ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ನ್ಯಾಯಾಲಯ ಸಿಸಿಬಿ ಅಧಿಕಾರಿಗಳಿಗೆ ಸೂಚಿಸಿದೆ.

ಆಂಬಿಡೆಂಟ್​ನಲ್ಲಿ ಜನಾರ್ಧನ ರೆಡ್ಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಅರ್ಜಿ ಸಲ್ಲಿಸಲು ಸಿಸಿಬಿ ತಯಾರಿ ನಡೆಸಿತ್ತು. ಇಂದು ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಇದುವರೆಗೆ ಈ ಪ್ರಕರಣದಲ್ಲಿ ಆಲಿಖಾನ್​ ವಿಚಾರಣೆ ನಡೆದಿರಲಿಲ್ಲ.

57 ಕೆಜಿ ಚಿನ್ನ ವರ್ಗಾವಣೆ ಹಾಗೂ ಚಿನ್ನದ ಗಟ್ಟಿಯನ್ನು ಹಣಕ್ಕೆ ಬದಲಿಸಿರುವ ಶಂಕೆ ಇತ್ತು. ಹಣ ಮಾರ್ಪಾಡು ಮಾಡಿರುವುದರಲ್ಲಿ ಆಲಿಖಾನ್​ ಪಾತ್ರ ಪ್ರಮುಖವಾಗಿತ್ತು ಎಂಬ ಅನುಮಾನ ಇದೆ. ಜೊತೆಗೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಆಲಿಖಾನ್​ನ್ನು ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಿ, ಸಿಸಿಬಿ ಪೊಲೀಸರು ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇತ್ತ ಆಲಿಖಾನ್​ ಪರ ವಕೀಲರು ಸಹ ಅರ್ಜಿ ಸಲ್ಲಿಸಿದ್ದರು.

ಮೊನ್ನೆ, ಮ್ಯಾಜಿಸ್ಟ್ರೇಟ್​ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಿರೀಕ್ಷಣಾ ಜಾಮೀನು ರದ್ದುಗೊಂಡ ಹಿನ್ನಲೆಯಲ್ಲಿ ಆಲಿಖಾನ್​ ಕೋರ್ಟ್ ಗೆ ಶರಣಾಗಿದ್ದ.

Comments are closed.