ಕರ್ನಾಟಕ

ಸಿಗರೇಟ್ ವಿಚಾರವಾಗಿ ನಡೆದ ಜಗಳವೊಂದು ಒಬ್ಬನ ಕೊಲೆಯಲ್ಲಿ ಅಂತ್ಯ ! ಕೇವಲ 15 ರೂ.ಗಾಗಿ ಒಂದು ಜೀವವೇ ಹೋಯಿತು…!

Pinterest LinkedIn Tumblr

ಬೆಂಗಳೂರು: ಸಿಗರೇಟ್ ವಿಚಾರವಾಗಿ ನಡೆದ ಜಗಳವೊಂದು ಒಬ್ಬನ ಕೊಲೆಯೊಡನೆ ಅಂತ್ಯವಾಗಿರುವ ಘೋರ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು ವಿಜಯನಗರದ ವಾಟರ್ ಟ್ಯಾಂಕ್ ಬಳಿ ಯುವಕರ ನಡುವಿನ ಜಗಳದಲ್ಲಿ ಮಹದೇವಯ್ಯ ಎನ್ನುವಾತ ಸಾವನ್ನಪಿದ್ದಾನೆ. ಅಕ್ಟೋಬರ್ 4ರಂದು ನಡೆದ ಘಟನೆಯಲ್ಲಿ ಇನ್ನೋರ್ವ ವ್ಯಕ್ತಿ ರಾಜ್‍ದೀಪ್ ಗಂಭೀರ ಗಾಯಗೊಂಡಿದ್ದಾರೆ.

ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಇಡೀ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾನೆ. ಓರ್ವ ಆರೋಪಿಯನ್ನು ಅದೇ ದಿನ ಸ್ಥಳೀಯರೇ ಒತ್ಟಾಗಿ ಪೋಲೀಸರಿಗೆ ಒಪ್ಪಿಸಿದ್ದು ಇದೀಗ ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳನ್ನು ಸಹ ಪೋಲೀಸರು ವಶಕ್ಕೆ ಪಡೆದಿದಾರೆ.

ಘಟನೆ ವಿವರ
ಅಕ್ಟೋಬರ್ 4ರಂದು ವಿಜಯನಗರದಲ್ಲಿನ ರಾಜ್‌ದೀಪ್‌ಸಿಂಗ್ ಅವರ ಅಂಗಡಿಯಲ್ಲಿ ವಿನಯ್‌ ಸಿಗರೇಟ್ ಖರೀದಿಸಿದ್ದಾನೆ. ಇದಕ್ಕೆ ಆತ ಪೇಟಿಎಂ ಮೂಲಕ ಹಣ ಪಾವತಿಸುವುದಾಗಿ ಹೇಳಿದಾಗ ಅಂಗಡಿಯಾತ “ನಮ್ಮಲ್ಲಿ ಪೇಟಿಎಂ ಇಲ್ಲ” ಎಂದಿದ್ದಾನೆ.

ಆದರೆ ವಿನಯ್ ತಾನು ಖರೀದಿಸಿದ್ದ ಸಿಗರೇಟ್ ಗೆ ಕೊಡಬೇಕಿದ್ದ 15 ರು. ನೀಡದೆ ವಾಪಾಸಾಗಿದ್ದ. ಆಗ ಅಂಗಡಿಯ ಕೆಲಸಗಾರ ಈ ವಿಚಾರವನ್ನು ತನ್ನ ಮಾಲೀಕನಿಗೆ ಹೇಳಿದ್ದಾನೆ.ಇದರ ಕುರಿತು ವಿಚಾರಿಸಲು ಮಾಲೀಕ ರಾಜ್‌ದೀಪ್‌ಸಿಂಗ್ ಸ್ನೇಹಿತ ಮಹದೇವಯ್ಯ ಜತೆಯಾಗಿ ಆಟದ ಮೈದಾನಕ್ಕೆ ಬಂದಿದ್ದಾರೆ.

ಆಗ ವಿನಯ್ ಬಳಿ ಹಣ ಕೇಳಿದ್ದ ರಾಜ್‌ದೀಪ್‌ಸಿಂಗ್ ಹಣ ಕೊಡಲೊಪ್ಪದೆ ಹೋದಾಗ ಮಹದೇವಯ್ಯನ ಸಹಕಾರದಿಂಡ ಅವನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಲು ಹೋಗಿದ್ದರು.ಆಗ ವಿನಯ್ ನೆರವಿಗೆ ಧಾವಿಸಿದ ಆತನ ಸ್ನೇಹಿತರು ಆಟದ ಮೈದಾನದಲ್ಲಿದ್ದ ಬ್ಯಾಟ್ ಹಗೂ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದಾಗಿ ಮಹದೇವಯ್ಯ ಸಾವನ್ನಪ್ಪಿದ್ದರೆ. ರಾಜ್‌ದೀಪ್‌ಸಿಂಗ್ ಗೆ ಗಂಭೀರ ಗಾಯವಾಗಿದ್ದವು.ಅವರ ಬೆನ್ನುಹಾಗೂ ಕಾಲಿಗೆ ಪೆತ್ಟಾಗಿದ್ದರೂ ಸ್ಥಳದಿಂದ ಪರಾರಿಯಾಗಿ ಅವರು ಜೀವ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು.

ಕೆಲ ಸ್ಥಳೀಯರು ಆರೋಪಿ ವಿನಯ್ ನನ್ನು ಅಂದೇ ಪೋಲೀಸರಿಗೆ ಒಪ್ಪಿಸಿದ್ದಾರೆ.ಈಗ ಘಟನೆಯ ವೀಡಿಯೋ ದೃಶ್ಯವನ್ನಾಧರಿಸಿ ಪೋಲೀಸರು ಇನ್ನಿಬ್ಬರು ಆರೋಪಿಗಳನ್ನೂ ಸಹ ವಶಕ್ಕೆ ಪಡೆದಿದ್ದಾರೆ.

Comments are closed.