
ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ದರ್ಶನ್ ಕಾರು ಅಪಘಾತದ ಸೀಕ್ರೆಟ್ ಇದೀಗ ಬಹಿರಂಗವಾಗಿದೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಚಾರ್ಜ್ಶೀಟ್ನಲ್ಲಿ ಮುಚ್ಚಿಟ್ಟಿದ್ದ ಸತ್ಯ ಬಯಲಾಗಿದ್ದು, ಆಕ್ಸಿಡೆಂಟ್ ಆದಾಗ ದರ್ಶನ್ ಕಾರಿನಲ್ಲಿದ್ದದ್ದು 4 ಮಂದಿ ಅಲ್ಲ 5 ಮಂದಿಯಂತೆ. ಆ ಇನ್ನೊಬ್ಬ ವ್ಯಕ್ತಿ ಯಾರು ಗೊತ್ತಾ..? ಈ ಸ್ಟೋರಿ ಓದಿ.
ಹೌದು, ದರ್ಶನ್ ಮತ್ತು ಟೀಂ ಮುಚ್ಚಿಟ್ಟಿದ್ದ ಸತ್ಯ ಚಾರ್ಜ್ ಶೀಟ್ನಲ್ಲಿ ಬಯಲಾಗಿದೆ. ಕಾರಿನಲ್ಲಿ 5 ಜನ ಇದ್ದರು ಎಂಬ ಸತ್ಯ ಗೊತ್ತಾಗಿದೆ. ಅಷ್ಟೇ ಅಲ್ಲದೇ ಅಪಘಾತಕ್ಕೆ ಯಾವುದೇ ತಾಂತ್ರಿಕ ದೋಷ ಕಾರಣ ಅಲ್ಲ ಅಂತ ಸ್ಪಷ್ಟವಾಗಿ ವರದಿಯಲ್ಲೇ ಉಲ್ಲೇಖವಾಗಿದೆ. ಅಪಘಾತದ ದಿನ ಕಾರಿನಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್, ಆ್ಯಂಟೋನಿ ರಾಯ್ ಜೊತೆ ಮತ್ತೊಬ್ಬ ವ್ಯಕ್ತಿ ಪ್ರಕಾಶ್ ಕೂಡ ಇದ್ದರು ಎಂಬ ಸತ್ಯ ಈಗ ಬಟಾಬಯಲಾಗಿದೆ.
ಆದರೆ ಪ್ರಕಾಶ್ ಹೆಸರು ಮಾತ್ರ ಯಾಕೆ ಮುಚ್ಚಿಟ್ಟರು ಎನ್ನುವುದೇ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಪಘಾತದ ದಿನ ಆ್ಯಂಟೋನಿ ರಾಯ್ ಕಾರು ಚಲಾಯಿಸುತ್ತಿದ್ದರು. ಆ್ಯಂಟೋನಿ ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ 5 ಮಂದಿ ಜೊತೆಗ ಸಹಾಯಕ್ಕೆ ಬಂದ ಒಬ್ಬರಿಗೂ ಗಾಯವಾಗಿತ್ತು.
ಚಾರ್ಜ್ ಶೀಟ್ನಲ್ಲಿರುವ ಪ್ರಮುಖ 10 ಅಂಶಗಳು:
ಆ್ಯಕ್ಸಿಡೆಂಟ್ ಆದಾಗ ದರ್ಶನ್ ಕಾರಿನಲ್ಲಿದ್ದದ್ದು 4 ಅಲ್ಲ 5 ಮಂದಿ!
ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು 5 ಅಲ್ಲ 6 ಮಂದಿ
ಅಪಘಾತಕ್ಕೆ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ
ಕಾರಿನಲ್ಲಿದ್ದದ್ದು ದರ್ಶನ್, ದೇವರಾಜ್, ಪ್ರಜ್ವಲ್, ಆಂಟೋನಿ ರಾಯ್ ಜೊತೆ ಪ್ರಕಾಶ್
ಪ್ರಕಾಶ್ ಹೆಸರು ಗೌಪ್ಯವಾಗಿಟ್ಟಿದ್ದರು ದರ್ಶನ್ ಆ್ಯಂಡ್ ಟೀಂ
ಅಪಘಾತದ ದಿನ ಕಾರು ಚಲಾಯಿಸುತ್ತಿದ್ದದ್ದು ಆಂಟೊನಿ ರಾಯ್
ಆ್ಯಂಟೋನಿ ರಾಯ್ ನಿರ್ಲಕ್ಷ್ಯತನದಿಂದ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿ
ಕಾರಿನಲ್ಲಿದ್ದ 5 ಮಂದಿಗೆ, ಸಹಾಯಕ್ಕೆ ಬಂದ ಒಬ್ಬರಿಗೆ ಗಾಯ
ಕಾರು ಅಪಘಾತಕ್ಕೆ ಯಾವುದೇ ತಾಂತ್ರಿಕ ದೋಷ ಕಾರಣ ಅಲ್ಲ
ಇನ್ನು, ಎಲ್ಲರ ಹೇಳಿಕೆಯಲ್ಲೂ ಆ್ಯಂಟೋನಿ ನಿರ್ಲಕ್ಷ್ಯವೇ ಹೈಲೈಟ್ ಆಗಿದ್ದು, ಆ್ಯಂಟೋನಿಗೆ ಕೋರ್ಟ್ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಕೂಡ ಇದೆ. ಆದರೆ ಆ್ಯಂಟೋನಿ ಉಲ್ಟಾ ಹೊಡೆದರೆ ಇತರರು ಸಹ ಕೋರ್ಟ್ ಮೆಟ್ಟಿಲು ಏರಲೇಬೇಕು. ಆ್ಯಂಟೋನಿ ನಿರ್ಲಕ್ಷ್ಯತನದ ಚಾಲನೆ ಒಪ್ಪಿಕೊಂಡರೆ 2,500ರಿಂದ 3,000 ರೂವರೆಗೆ ದಂಡ ಹಾಕಿ ಕಳಿಸಬಹುದು. ನಿರ್ಲಕ್ಷ್ಯ ಅಲ್ಲ ಅಂದರೆ ಉಳಿದವರಿಗೆ ಕಂಟಕ ಕಾದಿದೆ ಎನ್ನಲಾಗಿದೆ. ಆ್ಯಂಟೋನಿ ಉಲ್ಟಾ ಹೊಡೆದರೆ ಇತರರಿಗೆ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಕಾರ್ನಲ್ಲಿದ್ದ ಎಲ್ಲರೂ ಕೋರ್ಟ್ಗೆ ಹೋಗಬೇಕಾಗುತ್ತದೆ. ಇಡೀ ಪ್ರಕರಣ ಇನ್ನಷ್ಟು ಕುತೂಹಲ ಕೆರಳಿಸುತ್ತಲೇ ಇದೆ.
Comments are closed.