ಕರ್ನಾಟಕ

ನಮಗೆ ಉಗ್ರಪ್ಪ ಮುಖ್ಯವಲ್ಲ, ರಾಹುಲ್ ಗಾಂಧಿ ಅವರು ಮುಖ್ಯ: ರಮೇಶ್​ ಜಾರಕಿಹೊಳಿ

Pinterest LinkedIn Tumblr


ಬಳ್ಳಾರಿ: ನಮಗೆ ಉಗ್ರಪ್ಪ ಅವರು ಮುಖ್ಯವಲ್ಲ ಬದಲಾಗಿ ರಾಹುಲ್​ ಗಾಂಧಿ ಅವರು ಮುಖ್ಯ. ಹೀಗಾಗಿ ನಾವು ಉಗ್ರಪ್ಪ ಅವರನ್ನು ಗೆಲ್ಲಿಸಬೇಕು ಎಂದು ಸಚಿವ ರಮೇಶ್​ ಜಾರಕಿಹೊಳಿ ಚುನಾವಣಾ ಪ್ರಚಾರ ವೇಳೆ ತಿಳಿಸಿದ್ದಾರೆ.

ಗಣಿನಾಡಿನ ಕೂಡ್ಲಿಗಿಯಲ್ಲಿ ಭಾನುವಾರ ನಡೆದ ಸ್ಥಳಿಯ ಮುಖಂಡರ ಸಭೆಯಲ್ಲಿ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗಾಗಿ ಶ್ರಮಿಸಿ, ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ಸ್ಥಳೀಯ ಮಟ್ಟದಲ್ಲಿ ಜನರ ವಿಶ್ವಾಸ ತೆಗೆದುಕೊಳ್ಳಿ. ವಿರೋಧ ಪಕ್ಷದ ನಾಯಕರು ನಮ್ಮ ವಿರುದ್ಧ ಸಾಕಷ್ಟು ಬಿಂಬಿಸುತ್ತಿದ್ದಾರೆ. ಇದಕ್ಕೆಲ್ಲಾ ನಾವು ಉತ್ತರ ಕೊಡಬೇಕು ಎಂದರೆ ನಾವು ಈ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೇಳಿದರು.

ಈ ಚುನಾವಣೆ ಬಹಳ ಮಹತ್ವದ್ದಾಗಿದೆ. ಕೆಲವೊಂದು ವಿಚಾರಗಳನ್ನು ಇಲ್ಲಿ ಚರ್ಚೆ ಮಾಡಲಾಗುವುದಿಲ್ಲ. ಕಾಂಗ್ರೆಸ್ಸಿಗರನ್ನು ಸೋಲಿಸೋಕೆ ಕಾಂಗ್ರೆಸ್ಸಿಗರೇ ಕಾರಣ ಎಂಬುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಅದರ ಬಗ್ಗೆಯೂ ವಿಚಾರ ಮಾಡಬೇಕು. ನಾವು ಕೇವಲ ಉಸ್ತುವಾರಿಗಳಷ್ಟೇ. ಎಲ್ಲ ಕೆಲಸಗಳನ್ನ ಸ್ಥಳಿಯ ಮುಖಂಡರೇ ಮಾಡಬೇಕು ಎಂದು ಸಭೆಯಲ್ಲಿ ತಿಳಿಸಿದರು.

Comments are closed.