ಕರ್ನಾಟಕ

ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ನಿಧನ

Pinterest LinkedIn Tumblr

ಗದಗ: ಗದಗಿನ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ.

ಇಂದು ಬೆಳಗಿನ ಜಾವ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಸ್ವಾಮೀಜಿಗಳ ನಿಧನದಿಂದಾಗಿ ಅವರ ಭಕ್ತ ವರ್ಗ ತೀವ್ರ ಆಘಾತಕ್ಕೆ ಒಳಗಾಗಿದ್ದು, ಎಲ್ಲೆಲ್ಲೂ ತೀವ್ರ ದುಃಖ ಆವರಿಸಿದೆ. ಅಪಾರ ಭಕ್ತವರ್ಗವನ್ನು ಸ್ವಾಮೀಜಿ ಅಗಲಿದ್ದು, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

ಜಂಟಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಶ್ರೀಗಳ ನಿಧನ ಆಘಾತ ತಂದಿದೆ ಎಂದಿದ್ದಾರೆ.

ಇದೇ ವೇಳೆ ತೋಂಟದಾರ್ಯ ಸ್ವಾಮೀಜಿ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು, ಅನ್ನದಾಸೋಹ, ವಿದ್ಯಾದಾಸೋಹ ಮಾಡಿದ ಶ್ರೀಗಳ ಅಗಲಿಕೆ ನೋವುಂಟು ಮಾಡಿದೆ ಎಂದರು.

ತೋಂಟದಾರ್ಯ ಸ್ವಾಮೀಜಿ ಬಹಳ ಓದಿದವರು. ವೈಚಾರಿಕತೆ ಬೆಳೆಸಿಕೊಂಡ ಸ್ವಾಮೀಜಿ. ತೋಂಟದಾರ್ಯ ಸ್ವಾಮೀಜಿ ನಿಧನ ನಾಡಿಗೆ ದಿಗ್ಭ್ರಮೆ ಮೂಡಿಸಿದೆ. ಧಾರ್ಮಿಕ ಕ್ಷೇತ್ರಕ್ಕೆ ಬಹಳ ನಷ್ಟ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದರು.

ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲೇ ನಿಂತು ಶ್ರೀಗಳ ಸಾವಿಗೆ ಒಂದು ನಿಮಿಷ ಮೌನ ಆಚರಿಸಿದರು.

Comments are closed.