ಕರ್ನಾಟಕ

ಮಾಜಿ ಮುಖ್ಯಮಂತ್ರಿ ಸಿದ್ದು ಬೆಂಬಲಿಗರ ಮಟ್ಟ ಹಾಕಲು ಮುಂದಾದ ಮೈತ್ರಿ ಸರ್ಕಾರ?

Pinterest LinkedIn Tumblr


ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಆಪ್ತ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಎಲ್. ರಘು ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮೈತ್ರಿ ಸರ್ಕಾರದಿಂದ ಸಿದ್ದರಾಮಯ್ಯನವರಿಗೆ ದೊಡ್ಡ ಆಘಾತ ನೀಡಲು ಯೋಚಿಸಲಾಗಿದೆ. ಆದಾಯಕ್ಕೂ ಮೀರಿ ಹೆಚ್ಚು ಆಸ್ತಿ ಗಳಿಸಿದ್ದ ಆರೋಪದ ಪ್ರಕರಣದಲ್ಲಿ ರಘು ವಿರುದ್ಧ ದೂಷಾರೋಪ ಪಟ್ಟಿ ಸಲ್ಲಿಸಲು ಯೋಚಿಸಿರುವ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಸಿದ್ದರಾಮಯ್ಯನವರಿಗೆ ಶಾಕ್​ ನೀಡಿದೆ.

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿಎಲ್​. ರಘು ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಎಂಬಂತೆ, ಎಂಎಲ್​ಸಿ ಗೋವಿಂದರಾಜ್ ನಿವಾಸದಲ್ಲಿ ಸಿಕ್ಕ ಡೈರಿಯಲ್ಲೂ ರಘು ಹೆಸರು ಪ್ರಸ್ತಾಪವಾಗಿತ್ತು. ಗುತ್ತಿಗೆದಾರರಿಂದ 6 ಕೋಟಿ ಹಣ ಪಡೆದ ಬಗ್ಗೆ ಡೈರಿಯಲ್ಲಿ ನಮೂದಿಸಲಾಗಿತ್ತು. ರಘು ವಿರುದ್ಧ ಎಸಿಬಿಯಲ್ಲೂ ದೂರು ದಾಖಲಾಗಿತ್ತು.

ಆದರೆ, ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಿರಲಿಲ್ಲ. ಆಗ ರಘು ವಿರುದ್ಧದ ಎಲ್ಲ ಪ್ರಕರಣಗಳನ್ನು ಕೈಬಿಡುವ ಯತ್ನವೂ ನಡೆದಿತ್ತು. ಇದೀಗ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ರಘು ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಈ ಮೂಲಕ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಪರೋಕ್ಷ ಹೊಡೆತ ನೀಡಲು ಸಿದ್ಧತೆಗಳು ನಡೆದಿವೆ.

Comments are closed.