ಕರ್ನಾಟಕ

ಸ್ಯಾಂಡಲ್‍ವುಡ್ ನಂತರ ಬಾಲಿವುಡ್‍ನಲ್ಲಿ ಸಂಯುಕ್ತ ಹೆಗ್ಡೆ ಕಿರಿಕ್!

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದ `ಕಿರಿಕ್ ಪಾರ್ಟಿ’ ಚಿತ್ರದ ನಟಿ ಸಂಯುಕ್ತ ಹೆಗ್ಡೆ ಈಗ ಬಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ. ಎಂಟಿವಿಯ `ಸ್ಪ್ಲಿಟ್ಸ್ ವಿಲ್ಲಾ’ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸಂಯುಕ್ತ ಇತರೇ ಸ್ಪರ್ಧಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.

ಸಂಯುಕ್ತ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಇತರ ಸ್ಪರ್ಧಿಗಳು ಅವರನ್ನು ಶೋದಿಂದ ಹೊರ ಕಳುಹಿಸಲು ಪ್ಲಾನ್ ಮಾಡುತ್ತಿದ್ದಾರೆ. ಸಂಯುಕ್ತ ಬಿಳಿ ಮತ್ತು ಕಪ್ಪು ಬಣ್ಣದ ಬಿಕಿನಿ ತೊಟ್ಟು ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ಸಿಂಬಾ ಹಾಗೂ ಮೈರಾ ನಡುವೆ ಲ್ವವಿಡವಿ ನಡೆಯುತ್ತಿತ್ತು. ಇದೀಗ ಸಂಯುಕ್ತ ಅವರ ಎಂಟ್ರಿಯಿಂದ ಸಿಂಬಾ ಕಣ್ಣು ಸಂಯುಕ್ತ ಕಡೆಗೆ ಜಾರಿದೆ. ಇದರಿಂದಾಗಿ ಮೈರಾ ಸಿಟ್ಟು ಮಾಡಿಕೊಂಡಿದ್ದಾರೆ.

ಇದೀಗ ಸಿಂಬಾ ಮತ್ತು ಸಂಯುಕ್ತ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದ್ದು, ಟೆಸ್ಟ್ ಯುವರ್ ಬಾಂಡ್ ಚಾಲೆಂಜ್‍ನಲ್ಲಿ ಸೋಲನ್ನು ಅನುಭವಿಸಿದ್ದರು. ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಒಂದೇ ದಿನಕ್ಕೆ ಸಂಯುಕ್ತ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಶೋನಿಂದ ಹೋರಬರುತ್ತಾರಾ ಇಲ್ಲ ಅಲ್ಲೇ ಉಳಿಯುತ್ತಾರಾ ಎಂಬುದು ಮುಂದಿನ ಎಫಿಸೋಡ್‍ನಲ್ಲಿ ಗೊತ್ತಾಗಲಿದೆ. ಬಾಲಿವುಡ್ ನಟಿ ಸನ್ನಿಲಿಯೋನ್ ಮತ್ತು ರಣ್‍ವಿಜಯ್ ಸಿಂಗಾ ಈ ಕಾರ್ಯಕ್ರಮವನ್ನ ನಿರೂಪಿಸುತ್ತಿದ್ದಾರೆ.

ಕನ್ನಡ ಬಿಗ್‍ಬಾಸ್ 5ನೇ ಆವೃತ್ತಿಯಲ್ಲಿ ಸಂಯುಕ್ತಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಯನ್ನು ಪ್ರವೇಶಿಸಿದ್ದರು. ಅಲ್ಲೂ ಕೂಡ ಪ್ರತಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

Comments are closed.