
ಬಾಗಲಕೋಟೆ: ಗಣಿ ಧಣಿ ಎಂದೇ ಕರೆಸಿಕೊಳ್ಳುತ್ತಿದ್ದ ಜನಾರ್ದನ ರೆಡ್ಡಿ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು, ಆಮೇಲೆ ಶಾಸಕರಾಗಿ ಬಳ್ಳಾರಿಯನ್ನು ಆಳಿದವರು. ಆದರೆ, ಸದ್ಯಕ್ಕೆ ಯಾವುದೇ ಅಧಿಕಾರವಿಲ್ಲದ ಅವರು ಮಾಜಿ ಶಾಸಕರಾಗಿದ್ದರೂ ಶಾಸಕರು ಎಂದು ನಾಮಫಲಕವನ್ನು ಹೊತ್ತಿರುವ ಕಾರಿನಲ್ಲೇ ಓಡಾಡುತ್ತಿದ್ದಾರೆ.
ಇದನ್ನು ನೋಡಿದವರು ಇವರ್ಯಾವ ಊರಿನ ಶಾಸಕ? ಎಂದು ಹುಬ್ಬೇರಿಸುವಂತಾಗಿದೆ. ಶಾಸಕರು ಎಂದು ನಾಮಫಲಕವನ್ನು ಹಾಕಿಕೊಂಡಿರುವ ಕಾರಿನಲ್ಲೇ ಓಡಾಡುವ ಜನಾರ್ದನ ರೆಡ್ಡಿ ತಾವು ಮಾಜಿ ಶಾಸಕ ಎಂಬ ವಿಷಯವನ್ನು ಮರೆತಂತಿದೆ. ಮುಧೋಳಕ್ಕೆ ಭೇಟಿ ನೀಡಿದಾಗಲೂ ಶಾಸಕರು ಎಂಬ ನಾಮಫಲಕ ಉಳ್ಳ ಕಾರ್ನಲ್ಲಿ ಜನಾರ್ದನ ರೆಡ್ಡಿ ಓಡಾಟ ನಡೆಸಿದ್ದಾರೆ.
ಬೆಳಗಾವಿಯಿಂದ ಶಾಸಕರ ನಾಮಫಲಕವುಳ್ಳ ಕಾರ್ನಲ್ಲಿ ಮುಧೋಳಕ್ಕೆ ಬಂದ ಮಾಜಿ ಶಾಸಕ ಜನಾರ್ದನ ರೆಡ್ಡಿಮುಧೋಳ ನಗರದಲ್ಲಿ ರಾಜ್ಯಮಟ್ಟದ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ಕೆಎ 05, 5252 ಸಂಖ್ಯೆಯುಳ್ಳ ಕಾರ್ಗೆ ಶಾಸಕರ ನಾಮಫಲಕ ಹಾಕಿಕೊಳ್ಳಲಾಗಿದೆ.
ಹಾಗಾಗಿ, ತಮ್ಮ ಹಳೆಯ ನಾಮಫಲಕವನ್ನೇ ಜನಾರ್ದನ ರೆಡ್ಡಿ ಇನ್ನೂ ಬದಲಾಯಿಸಲ್ಲವೋ ಅಥವಾ ಯಾವುದಾದರೂ ಎಂಎಲ್ಎ ಕಾರ್ನಲ್ಲಿ ರೆಡ್ಡಿ ಓಡಾಡುತ್ತಿದ್ದಾರಾ? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
Comments are closed.