ಕರ್ನಾಟಕ

ನಾವೇನು ಇಲ್ಲಿ ಸಮಾಜ ಸೇವೆ ಮಾಡಲು ಬಂದು ಕುಳಿತಿಲ್ಲ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ

Pinterest LinkedIn Tumblr


ಶಿರಸಿ: ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಮತ್ತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಗುರುವಾರ ಶಿರಸಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ”ನಾವು ಇಲ್ಲಿ ಬಂದು ಕುಳಿತಿರುವುದು ರಾಜಕಾರಣ ಮಾಡಲಿಕ್ಕೆ. ರಾಜಕಾರಣ ಬಿಟ್ಟು ಬೇರೆನು ಮಾಡಬೇಕು. ರಾಜಕಾರಣ ಮಾಡುವುದಕ್ಕಾಗಿ ನಾವು ತಾಲೂಕು ಅಧ್ಯಕ್ಷ ಆಗಿದ್ದು, ತಾಲೂಕು ಪ್ರಮುಖ್‌ ಆಗಿದ್ದು, ಜಿಲ್ಲಾ ಪ್ರಮುಖ್‌ ಆಗಿದ್ದು. ನಾವೇನು ಇಲ್ಲಿ ಸಮಾಜ ಸೇವೆ ಮಾಡಲು ಬಂದು ಕುಳಿತಿಲ್ಲ” ಎಂದರು.

ಆ ಬಳಿಕ ‘ಮಾಧ್ಯಮಗಳು ಹೇಗೆ ಬರೆದುಕೊಳ್ಳುತ್ತಾರೋ ಹಾಗೇ ಬರೆದುಕೊಳ್ಳಲಿ’ ಎಂದು ಸವಾಲನ್ನೂ ಹಾಕಿದರು.

Comments are closed.