ಕರ್ನಾಟಕ

ರಾಮನಗರದಲ್ಲಿ ಕಾಂಗ್ರೆಸ್​​​ ಬಂಡಾಯ ಅಭ್ಯರ್ಥಿ ಕಣಕ್ಕೆ: ಸುಲಭವಾಗಿ ಗೆಲ್ಲಬಹುದಿದ್ದ ಅನಿತಾ ಕುಮಾರಸ್ವಾಮಿಗೆ ಸಂಕಷ್ಟ

Pinterest LinkedIn Tumblr


ಬೆಂಗಳೂರು: ರಾಮನಗರದಲ್ಲಿ ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿಯಿಂದಲೇ ಜೆಡಿಎಸ್​​ಗೆ ಸಂಕಷ್ಟ ಎದುರಾಗಿದೆ. ಇದೇ ನವೆಂಬರ್​​​. 3 ರಂದು ಎದುರಾಗಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್​​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿ ಇಕ್ಬಾಲ್​​ ಹುಸೇನ್​​​ ಕಣಕ್ಕಿಳಿಯಲ್ಲಿದ್ದಾರೆಯಂತೆ. ಹೀಗಾಗಿ ಸಿಎಂ ಭದ್ರಕೋಟೆಯಲ್ಲಿಯೇ ಅನಿತಾ ಕುಮಾರಸ್ವಾಮಿಯವರಿಗೆ ಸೋಲಿನ ಭೀತಿ ಕಾಡುತ್ತಿದೆ ಎನ್ನಲಾಗಿದೆ.

ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ/ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಮುಂದುವರೆಯಲಿದೆ ಎನ್ನಲಾಗಿತ್ತು. ಆದರೆ, ರಾಮನಗರದಲ್ಲಿ ಜೆಡಿಎಸ್​​ ಜೊತೆಗಿನ ಮೈತ್ರಿಗೆ ಕಾಂಗ್ರೆಸ್​​ನ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೆಡಿಎಸ್​ಗೆ ನಾವು​​ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.

ಇದೀಗ ಘೋಷಣೆಯಂತೆಯೇ ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿ ಇಕ್ಬಾಲ್​​ ಹುಸೇನ್​​ ಅವರನ್ನು ಅಖಾಡಕ್ಕಿಳಿಸಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ರಾಮನಗರದಲ್ಲಿ ಸುಲಭವಾಗಿ ಗೆಲ್ಲಬಹುದು ಎಂದು ಯೋಚಿಸಿದ್ದ ಸಿಎಂಗೆ ಕಾಂಗ್ರೆಸ್​ ನಾಯಕರ ಬಂಡಾಯ ತಲೆನೋವಾಗಿ ಪರಿಣಮಿಸಿದೆ. ಮೈತ್ರಿಯಲ್ಲಿ ಸ್ಪರ್ಧಿಸಲು ಅವಕಾಶಗಳಿದ್ದರೂ ಕೈ ಪಾಳೆಯದ ಕೆಲವು ನಾಯಕರಿಂದ ಅಪಸ್ವರ ಕೇಳಿ ಬಂದಿದೆ.

ಇನ್ನು ತಮ್ಮದೇ ಜೆಡಿಎಸ್​​ ಪಕ್ಷದ ಕಾರ್ಯಕರ್ತರಲ್ಲಿಯೂ ಮೈತ್ರಿ ವಿಚಾರದ ಸಲುವಾಗಿ ಕೆಲವು ಅಸಮಾಧಾನಗಳಿವೆ ಎನ್ನಲಾಗಿದೆ. ಮತ್ತೊಂದೆಡೆ ಇಕ್ಬಾಲ್​​ ಹುಸೇನ್​​ ಕಣಕ್ಕಿಳಿದಿದ್ದ ಕಾರಣದಿಂದಲೇ ಕಳೆದ ಬಾರಿ ಕೇವಲ 22 ಸಾವಿರ ಅಂತರದ ಮತಗಳಿಂದ ಸಿಎಂ ಕುಮಾರಸ್ವಾಮಿ ಗೆದ್ದಿದ್ದರು. ಆದರೆ, ಈ ಬಾರಿ ಅನಿತಾ ಕುಮಾರಸ್ವಾಮಿ ವಿರುದ್ಧ ಮುಸ್ಲಿಂ ಸಮುದಾಯದ ಮತಗಳ ಮೂಲಕ ಇಕ್ಬಾಲ್​ ಗೆದ್ದರು ಆಶ್ಚರ್ಯವಿಲ್ಲ.

ಅನಿತಾ ಕುಮಾರಸ್ವಾಮಿ ಅವರ ಎದುರು ಇಕ್ಬಾಲ್​​ ಹುಸೇನ್​​ ನಿಂತರೇ ಜೆಡಿಎಸ್​​ಗೆ ಗೆಲುವು ಕಷ್ಟವಾಗಲಿದೆ. ಕಳೆದ ಸಲ ಚುನಾವಣೆಯಲ್ಲಿ 69 ಸಾವಿರ ಮತಗಳಿಸಿದ್ದ ಇಕ್ಬಾಲ್, ಅನಿತಾ ಕುಮಾರಸ್ವಾಮಿ ಅವರಿಗೆ ಪೈಪೋಟಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಕಾಂಗ್ರೆಸ್​​ ಜೊತೆಗೆ ಮೈತ್ರಿ ಒಪ್ಪಂದವಿದ್ದರೂ ಮಾಜಿ ಪ್ರಧಾನಿ ಎಚ್​​ಡಿ ದೇವೆಗೌಡ ನೇತೃತ್ವದ ಜೆಡಿಎಸ್​​ಗೆ ಆತಂಕದಲ್ಲಿದೆ.

ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್​​ ನಾಯಕ ಲಿಂಗಪ್ಪ ಅವರು ಈಗಾಗಲೇ ಅಪಸ್ವರ ಎತ್ತಿದ್ದಾರೆ. ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿಗಾಗಲೀ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗಾಗಲೀ ಬೆಂಬಲ ನೀಡುವುದಿಲ್ಲ. ನಾವು ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಆಲೋಚನೆ ಮಾಡಿದ್ದೇವೆ ಎಂದು ಹೇಳುವ ಮೂಲಕ ಲಿಂಗಪ್ಪ ಅವರು ಎರಡು ಪಕ್ಷಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ರಾಜ್ಯ ಕಾಂಗ್ರೆಸ್​ ನಾಯಕರು ಸ್ಥಳೀಯ ರಾಜಕೀಯ ಪರಿಸ್ಥಿತಿ ನೋಡಬೇಕಿದೆ. ರಾಮನಗರ ಕ್ಷೇತ್ರವನ್ನು ಸಂಪೂರ್ಣವಾಗಿ ಜೆಡಿಎಸ್‍ಗೆ ಬಿಟ್ಟುಕೊಟ್ಟರೆ, ನಾವು ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಸದ್ಯದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ, ಕಾಂಗ್ರೆಸ್​​ನಿಂದ ಬಂಡಾಯ ಅಭ್ಯರ್ಥಿಯನ್ನು ಹಾಕುವ ಸಾಧ್ಯತೆಗಳಿವೆ ಎಂದು ಇಕ್ಬಾಲ್​​ ಅನ್ಸಾರಿ ಸ್ಪರ್ಧೆ ವಿಚಾರಕ್ಕೆ ಇಂಬು ನೀಡಿದ್ದಾರೆ.

Comments are closed.