ಕರ್ನಾಟಕ

ತಮ್ಮ ಖಾತೆಗೆ 35 ಸಾವಿರ ವರ್ಗಾವಣೆ ಮಾಡಿಸಿಕೊಂಡ ಸೈಬರ್ ಖದೀಮರು!

Pinterest LinkedIn Tumblr


ಬೆಂಗಳೂರು: ಬ್ಯಾಂಕ್‌ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಸೈಬರ್‌ ಖದೀಮರು, 35 ಸಾವಿರ ರೂ.ಗಳನ್ನು ಅಕ್ರಮವಾಗಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.

ಈ ಸಂಬಂಧ ಎಚ್‌ಎಎಲ್‌ನ ಎಂ.ಕೃಷ್ಣ ಎಂಬುವರು ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಲ ದಿನಗಳ ಹಿಂದೆ ಕೃಷ್ಣ ಅವರು ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ಮತ್ತೊಂದು ಖಾತೆಗೆ 1,150 ರೂ. ಜಮಾ ಮಾಡಿದ್ದರು. ಆದರೆ, ಖಾತೆಯ ಕೊನೆಯ ಅಂಕಿ 256ರ ಬದಲು 259 ಎಂದು ನಮೂದಾಗಿ ಬೇರೆಯವರ ಖಾತೆಗೆ ಆ ಹಣ ವರ್ಗಾವಣೆಯಾಗಿತ್ತು. ಆಕಸ್ಮಿಕವಾಗಿ ಬೇರೆ ಖಾತೆಗೆ ಹಣ ವರ್ಗಾವಣೆಯಾಗಿದ್ದ ಕಾರಣ ಮೊಬೈಲ್‌ ಆ್ಯಪ್‌ ಮೂಲಕ ಲೋಪ ಸರಿಪಡಿಸುವ ಕುರಿತು ದೂರನ್ನು ನೀಡಿದ್ದರು.

‘‘ ನಿಮ್ಮ ಹಣ ಬೇರೆ ಖಾತೆಗೆ ಆಕಸ್ಮಿಕವಾಗಿ ವರ್ಗಾವಣೆಯಾಗಿದೆ ಎಂದು ನೀವು ಕೊಟ್ಟ ದೂರಿನಂತೆ ಹಣವನ್ನು ವಾಪಸ್‌ ಮಾಡುತ್ತೇವೆ ಎಂದು ಅ.3ರಂದು ಅಪರಿಚಿತರು ಕರೆ ಮಾಡಿ ತಿಳಿಸಿದ್ದರು. ಪೋನ್‌ಗೆ ಬಂದಿರುವ ಒಟಿಪಿಯನ್ನು ತಿಳಿಸಿ ಎಂದು ಅವರು ಕೋರಿದ್ದರು. ಅದರಂತೆ ನಾನು ಒಟಿಪಿ ಹೇಳಿದಾಗ ನನ್ನ ಖಾತೆಯಿಂದ 35 ಸಾವಿರ ರೂ. ವರ್ಗಾವಣೆ ಆಗಿದೆ’’ ಎಂದು ದೂರಿನಲ್ಲಿ ಕೃಷ್ಣ ತಿಳಿಸಿದ್ದಾರೆ

Comments are closed.