ಕರ್ನಾಟಕ

ತುಮಕೂರು ಮಾಜಿ ಮೇಯರ್‌, ಜೆಡಿಎಸ್‌ ನಾಯಕ ರವಿ ಕುಮಾರ್‌ ಬರ್ಬರ ಹತ್ಯೆ

Pinterest LinkedIn Tumblr


ತುಮಕೂರು: ಮಹಾನಗರ ಪಾಲಿಕೆಯ ಮಾಜಿ ಮೇಯರ್‌ ರವಿಕುಮಾರ್‌ ಅವರ ರಕ್ತ ಸಿಕ್ತ ಶವ ಭಾನುವಾರ ಬೆಳಗ್ಗೆ ನಗರದ ಬಟವಾಡಿ ಬಳಿ ಪತ್ತೆಯಾಗಿದೆ. ಅವರನ್ನು ಮಾರಾಕಾಯುಧಗಳಿಂದ ಕೊಚ್ಚಿ ಕೊಲೆಗೈದು ನಡುರಸ್ತೆಯಲ್ಲೇ ಎಸೆಯಲಾಗಿದೆ.

ಬೆಳಗ್ಗೆ ಸುಮಾರು 8 ಮಂದಿ ದುಷ್ಕರ್ಮಿಗಳು 407 ಟೆಂಪೋವೊಂದರಲ್ಲಿ ಬಂದು ರವಿ ಅವರನ್ನು ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಕ್ಯಾತ್ಸಂದ್ರ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ ಆಗಿದ್ದ ರವಿಕುಮಾರ್‌ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಭರ್ಜರಿ ಗೆಲುವು ಸಾಧಿಸಿದ್ದರು.

ತುಮಕೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರವಿ ತಲೆಗೆ ಗಂಭೀರ ಮಚ್ಚಿನಿಂದ ಕೊಚ್ಚಿದ ಪರಿಣಾಮ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲೆ ಪ್ರಾಣ ಪಕ್ಷಿ ಹಾರಿಹೋಗಿದೆ.

ಹತ್ಯೆಗೆ ಬಳಸಿರುವ 407 ಟೆಂಪೋ ಶವ ಪತ್ತೆಯಾದಲ್ಲಿಂದ 2 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.

ರಸ್ತೆಯಲ್ಲಿ ಎಸೆದು ಅಪಘಾತವೆಂದು ಬಿಂಬಿಸಲು ದುಷ್ಕರ್ಮಿಗಳು ಯೋಚಿಸಿದ್ದರು.

ಈ ಹಿಂದೆ ನಡೆದ ಹತ್ಯೆಯೊಂದರ ಸೇಡಿನಲ್ಲಿ ರವಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Comments are closed.