ಕರ್ನಾಟಕ

ಹೆಂಡತಿಯ ಶೀಲ ಶಂಕಿಸಿ ಹತ್ಯೆ ಮಾಡಿದ ಪತಿ!

Pinterest LinkedIn Tumblr


ಕೊಪ್ಪಳ: ಶೀಲ ಶಂಕಿಸಿ ವ್ಯಕ್ತಿಯೊಬ್ಬ ಪತ್ನಿಯ ಕುತ್ತಿಗೆ ಸೀಳಿ, ಬರ್ಬರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರದಲ್ಲಿ ನಡೆದಿದೆ.

ಕನಕಗಿರಿ ತಾಲೂಕಿನ ಬಂಕಾಪುರ ಯಮನಮ್ಮ ಕೊಲೆಯಾದ ದುರ್ದೈವಿ. ಬಂಕಾಪುರ ದುರಗಪ್ಪ ಕೃತ್ಯ ಎಸಗಿದ ಆರೋಪಿ. ದಂಪತಿಗೆ ಮದುವೆಯಾಗಿ 8 ವರ್ಷಗಳಾಗಿದ್ದು, ಮೂರು ಜನ ಮಕ್ಕಳಿದ್ದಾರೆ.

ಗರ್ಭಿಣಿಯಾಗಿದ್ದ ಯಮನವ್ವ ಹೆರಿಗೆಗೆ ಅಂತಾ ವಿಠಲಾಪುರದ ತವರು ಮನೆಗೆ ಬಂದಿದ್ದರು. ಮೂರು ತಿಂಗಳ ಹಿಂದಷ್ಟೇ ಯಮನವ್ವ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರಗಪ್ಪ ಪತ್ನಿ ವ್ಯಕ್ತಿಯೊಬ್ಬರ ಜೊತೆ ಅನೈತಿಕ ಸಂಭಂದ ಹೊಂದಿದ್ದಾಳೆಂದು ಅನುಮಾನ ವ್ಯಕ್ತಪಡಿಸಿದ್ದನು. ಅಷ್ಟೇ ಅಲ್ಲದೆ ತವರು ಮನೆಯಿಂದ ಆಸ್ತಿ ತರುವಂತೆ ಯಮನವ್ವ ಅವರಿಗೆ ದುರಗಪ್ಪ ಪೀಡಿಸುತ್ತಿದ್ದನಂತೆ. ಈ ಹಿಂದೆಯೂ ಪತಿಗೆ ಹಿಂಸೆ ನೀಡಿ, ಚಾಕುವಿನಿಂದ ಇರಿದಿದ್ದ. ಈ ಮೊದಲು ದುರಗಪ್ಪನ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.

ಇಂದು ಆಗಿದ್ದೇನು?:
ಯಮನಮ್ಮ ಅವರ ತವರು ಮನೆಗೆ ಬಂದ ಪತಿ ದುರಗಪ್ಪ, ಪತ್ನಿಯ ಜೊತೆಗೆ ಜಗಳ ಆರಂಭಿಸಿದ್ದಾನೆ. ಮಾತಿನ ಚಕಮಕಿ ಮುಂದುವರಿದಿದ್ದು, ಹೀಗಾಗಿ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿ ಕುಡಗೋಲಿನಿಂದ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಬಳಿಕ ನೇರವಾಗಿ ಕನಕಗಿರಿ ಪೊಲೀಸ್ ಠಾಣೆಗೆ ಬಂದು, ತಾನೇ ಕೊಲೆ ಮಾಡಿದ್ದಾಗಿ ಶರಣಾಗಿದ್ದಾನೆ.

Comments are closed.