ಕರ್ನಾಟಕ

ರಾಜ್ಯ ಬಿಜೆಪಿ ಸೋಲಿನ ರಹಸ್ಯ ಇಬ್ಬರು ದಿಗ್ಗಜರ ಒಳಜಗಳ

Pinterest LinkedIn Tumblr


ಬೆಂಗಳೂರು: ನಿನ್ನೆಯ ಬಿಬಿಎಂಪಿ ಮೇಯರ್​ ಗಿರಿ ಕಾಂಗ್ರೆಸ್​ ಕೈ ಸೇರಿದ್ದಕ್ಕೆ ಅಸಲಿ ಕಾರಣ ಏನು ಗೊತ್ತಾ..? ಮತ್ತೆ ಆಪರೇಷನ್​ ಕಮಲ ವಿಫಲವಾಗಿ ಯಾಕೆ.? ಯಡಿಯೂರಪ್ಪ ಆಸೆಗೆ ಸೋಲು ಆಗಿದ್ದೇಗೆ..? ಆ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ ನೋಡಿ.

ಬಿಬಿಎಂಪಿ ಚುನಾವಣೆಯಲ್ಲಿ ಮೇಯರ್​ ಗಿರಿಯನ್ನು ಗಂಗಾಬಿಕಾ ಮಲ್ಲಿಕಾರ್ಜುನ್​ ಅಲಂಕರಿಸಿ ರಾತ್ರಿ ಬಿಬಿಎಂಪಿ ಕಂಂಟ್ರೋಲ್​ ರೂಂಗೂ ಭೇಟಿ ಕೊಟ್ಟು ಡ್ಯೂಟಿ ಶುರು ಮಾಡಿದ್ದಾರೆ. ಆದರೆ ಬಿಜೆಪಿ ಕುರ್ಚಿ ಕಳೆದುಕೊಂಡಿದ್ದು ಯಾಕೆ ಅಂತ ಹುಡುಕಿದಾಗ ಗೊತ್ತಾಗಿದ್ದು ಬಿಜೆಪಿಯ ಇಬ್ಬರು ನಾಯಕರ ಒಳಜಗಳ. ಅವರೇ ಆರ್​.ಅಶೋಕ್​ ಹಾಗೂ​ ಅರವಿಂದ ಲಿಂಬಾವಳಿ.

ಬಿಜೆಪಿ ಸೋಲಿಗೆ ಬಿಜೆಪಿಯೇ ಕಾರಣ!

ಮೇಯರ್​ ಸ್ಥಾನಕ್ಕೆ ಆರ್​.ಅಶೋಕ್​ ಬೆಂಬಲಿತ ಶೋಭಾ ಆಂಜಿನಪ್ಪ ಆಯ್ಕೆ ಆಗಿದ್ದರು. ಅರವಿಂದ ಲಿಂಬಾವಳಿಗೂ ತಿಳಿಯದಂತೆ ಪ್ಲ್ಯಾನ್​ ಮಾಡಿದ್ದ ಆರ್​.ಅಶೋಕ್​ ಹಾಗೂ ತಂಡ ಶಾಸಕ ಸತೀಶ್​ ರೆಡ್ಡಿ, ಪದ್ಮನಾಭ ರೆಡ್ಡಿಯನ್ನು ಮುಂದೆ ಬಿಟ್ಟು ಕಾರ್ಯ ರೂಪಿಸಿತ್ತು. ಜೆಡಿಎಸ್​, ಕಾಂಗ್ರೆಸ್​ ಸದಸ್ಯರನ್ನ ಹೈಜಾಕ್​ ಮಾಡಿದರೂ ಒಗ್ಗಟ್ಟಿನ ಕೊರತೆ ಶುರುವಾಗಿತ್ತು. ಇತ್ತ ಕೊನೆ ಕ್ಷಣದಲ್ಲಿ ಸಿಎಂ ಮಾತಿಗೆ ಕಟ್ಟುಬಿದ್ದು ಪಕ್ಷೇತರ ಪಾಲಿಕೆ ಸದಸ್ಯರು ಕೈಕೊಟ್ಟಿದ್ದರು. ಆ ಮೂಲಕ 4ನೇ ಬಾರಿಗೆ ಅಶೋಕ್​ ಎಡವಿಬಿದ್ದರು. ಕಳೆದ ಬಾರಿ ಮೇಯರ್​ ಗಿಟ್ಟಿಸುವ ಭರವಸೆ ಕೊಟ್ಟು ಸೋಲುಂಡಿದ್ದರು. ಬಿಎಸ್​ವೈ ಪರಿವರ್ತನಾ ಯಾತ್ರೆಗೆ ಜನ ಸೇರಿಸದೇಯೂ ಸೋಲು ಅನುಭವಿಸಿದ್ದರು. ಈಗ ಆಪರೇಷನ್​ ಕಮಲಕ್ಕೆ ಕೈ ಹಾಕಿ ಮತ್ತೆ ಸೋಲು ಕಂಡಿದ್ದಾರೆ. ಲಿಂಬಾವಳಿ ಬಿಟ್ಟು ರಣತಂತ್ರ ಹೆಣೆದು ಬಿಬಿಎಂಪಿಯಲ್ಲಿ ಮತ್ತೆ ಮತ್ತೆ ಸೋಲಾಗಿದೆ.

ಇಷ್ಟಾದ್ರೂ ಆರ್​.ಅಶೋಕ್​ ಕಾಂಗ್ರೆಸ್​ ನಾಯಕರ ಮೇಲೆ ಗೂಬೆ ಕೂರಿಸಿದರು.

ಇಲ್ಲಿ ನಮಗೆ ಬೆಂಬಲ ಇರಲಿಲಲ್. ನಿಮಗೆಲ್ಲಾ ಗೊತ್ತೇ ಇರುವಂತೆ ನಾವು ಬೆಂಬಲ ಮಾಡಿ ನಮ್ಮ ಪ್ರಯತ್ನ ಮಾಡಿದ್ದೇವೆ. ಸಫಲ ಆಗಿದ್ದೆವು. ಆದರೆ ಇಂದು ಗೂಂಡಾಗಿರಿ ಮಾಡಿ ಅವರು(ಕಾಂಗ್ರೆಸ್​) ನಮ್ಮ ಬೆಂಬಲಕ್ಕಿದ್ದ ಅಭ್ಯರ್ಥಿಗಳನ್ನು ಹೊತ್ತೊಯ್ದಿದ್ದಾರೆ. ಹೀಗಾಗಿ ಅವರು ಸಫಲರಾಗಿದ್ದಾರೆ. ಹೀಗಾಗಿ ಹೇಳಿಕೊಳ್ಳುವಂತಹ ಸಾಧನೆ ಅವರೇನೂ ಮಾಡಿಲ್ಲ. ಇಷ್ಟೆಲ್ಲಾ ಬೆಂಬಲ ಇದ್ದರೂ ರೆಸಾರ್ಟ್​ಗೆಲ್ಲಾ ಹೋಗಿ ಬಂದಿದ್ಧಾರೆ. ಇನ್ನು ಮುಂದೆ ವಿರೋಧ ಪಕ್ಷವಾಗಿ ನಾವು ಅವರ ವಿರುದ್ಧ ಹೋರಾಟ ನಡೆಸುತ್ತೇವೆ

— ಆರ್​. ಅಶೋಕ್​, ಬಿಜೆಪಿ ನಾಯಕ

ಟಾರ್ಗೆಟ್​ ಬೆಂಗಳೂರು 2019ಕ್ಕೆ ಹಿನ್ನಡೆ: ಹಾಲಿ ಮೂವರು ಸಂಸದರಿಗೆ ತಳಮಳ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬೆಂಗಳೂರಿನ ಮೂರು ಕ್ಷೇತ್ರಗಳನ್ನು ಗೆಲ್ಲಬೇಕು. ಅದಕ್ಕೆ ಬಿಬಿಎಂಪಿ ಚುಕ್ಕಾಣಿ ಹಿಡಿಯಬೇಕು ಅಂತ ಆರ್. ಅಶೋಕ್​ಗೆ ಜವಬ್ದಾರಿ ಕೊಟ್ಟಿತ್ತು ಆದರೆ ಅರವಿಂದ ಲಿಂಬಾವಳಿ ಜೊತೆ ನೀಡಲಿಲ್ಲ. ಈಗ ಬೆಂಗಳೂರಿನ 3 ಲೋಕಸಭೆ ಚುನಾವಣೆ ಕತೆ ಏನು ಎನ್ನುವ ತಳಮಳ ಕಮಲದ ಕಲಿಗಳಲ್ಲಿ ಶುರುವಾಗಿದೆ.

Comments are closed.