ಕರ್ನಾಟಕ

400 ರೂ ಬೆಲೆಯ ಗಣೇಶ ವಿಗ್ರಹಗಳು 1 ರೂ.ಗೆ ಮಾರಾಟ

Pinterest LinkedIn Tumblr


ಬೆಂಗಳೂರು: ಗಣೇಶನ ವಿಗ್ರಹ ಇಲ್ಲದೇ ಗಣೇಶೋತ್ಸವ ಆಚರಿಸಿದ ಯುವಕರ ಬಳಗ ಇದೀಗ ಬೆಂಗಳೂರು ನಗರದಲ್ಲಿ ಸುದ್ದಿಯಾಗಿದೆ.

ವಿದ್ಯಾರಣ್ಯಪುರ ನವ ಯುವಕರ ಬಳಗ, ಸುತ್ತಮುತ್ತಲ ಜಾಗಗಳಲ್ಲಿ 100ಕ್ಕೂ ಅಧಿಕ ಸಸಿಗಳನ್ನು ನೆಟ್ಟು, ಗಣೇಶೋತ್ಸವ ಆಚರಿಸಿದ್ದಾರೆ. ಅಷ್ಟು ಮಾತ್ರವಲ್ಲ, ಗೃಹ ರಕ್ಷಕದಳದ 13ನೇ ವಿಭಾಗಕ್ಕೆ ಮಾರುತಿ ವ್ಯಾನ್‌ ಒಂದನ್ನು ಕೊಡುಗೆಯಾಗಿ ನೀಡುವ ಮೂಲಕ ಉತ್ಸವವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಇನ್ನು ಕುಟುಂಬ ಸದಸ್ಯರೆಲ್ಲರೂ ಗ್ರೀನ್‌ ಗಣೇಶೋತ್ಸವ ಆಚರಣೆಗೆ ಪ್ರೇರೇಪಿಸಲು, ಸುಮಾರು 300-400 ಮಣ್ಣಿನ ಗಣೇಶ ಮೂರ್ತಿಯನ್ನು ಖರೀದಿಸಿ, 1 ರೂ. ಗೆ ಹಂಚಿದ್ದಾರೆ.

ಈ ಹಿಂದೆ ಎನ್‌ಟಿಎ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಮ್ಯೂಸಿಕ್‌ ಇತ್ಯಾದಿಗಳನ್ನು ಇಟ್ಟ ವಿಜ್ರಂಭಣೆಯಿಂದ ನಡೆಸುತ್ತಿದ್ದೆವು. ಒಂದು ವರ್ಷ ಗಣೇಶೋತ್ಸವ ಪಿತೃ ಪಕ್ಷದಲ್ಲಿ ಬಂದಿದ್ದರಿಂದ ಆಚರಿಸಲು ಆಗಿಲ್ಲ. ಪ್ರತಿ ವರ್ಷ 10 ಲಕ್ಷ ರೂ. ಖರ್ಚು ಮಾಡುತ್ತಿದ್ದೆವು. ಹಿರಿಯ ವ್ಯಕ್ತಿಯೋರ್ವರು ಸಮಾಜಕ್ಕೆ ಒಳಿತಾಗುವಂತೆ ಗಣೇಶೋತ್ಸವ ಆಚರಿಸಲು ಸಲಹೆ ನೀಡಿದ ಹಿನ್ನೆಲೆಯಲ್ಲಿ, ಬಳಗದ ಕಾರ್ಯವನ್ನೇ ಬದಲಿಸಿದೆವು ಎಂದು ಬಗದ ಅಧ್ಯಕ್ಷ ಎಚ್‌.ಮಧು ಹೇಳಿದ್ದಾರೆ.

ಸಮುದಾಯದ ಜನರ ಸುರಕ್ಷತೆ ನಿಟ್ಟಿನಲ್ಲಿ ವಿದ್ಯಾರಣ್ಯಪುರ ಸುತ್ತಮುತ್ತ ಸುಮಾರು 75 ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರ ನೆರವಿನೊಂದಿಗೆ ಬಳಗ ಅಳವಡಿಸಿದೆ ಎಂದು ಅವರು ಹೇಳಿದ್ದಾರೆ.

Comments are closed.