ಕರ್ನಾಟಕ

ಆಧಾರ್ ಸುಪ್ರೀಂ ತೀರ್ಪು: ಕಂಪನಿಗಳಿಗೆ ಸಂಕಷ್ಟ

Pinterest LinkedIn Tumblr


ಬೆಂಗಳೂರು: ಆಧಾರ್‌ ಅನ್ನು ಗುರುತು ದೃಢೀಕರಣಕ್ಕೆ ನೀಡುವಂತೆ ಕಂಪನಿಗಳು ಒತ್ತಾಯಿಸುವಂತಿಲ್ಲ ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಬೆನ್ನಲ್ಲೇ, ಆಧಾರ್ ಗುರುತನ್ನು ಕಡ್ಡಾಯ ಮಾಡಿದ್ದ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ.

ಆಪ್ ಮೂಲಕ ಪಾವತಿ ಮತ್ತು ಬುಕಿಂಗ್, ವಿವಿಧ ಸೇವೆಗಳಿಗೆ ಆಧಾರ್ ಗುರುತನ್ನು ಬಯಸುತ್ತಿದ್ದ ಕಂಪನಿಗಳು ಗ್ರಾಹಕರ ಬಳಿ ಆಧಾರ್ ಗುರುತಿನ ದೃಢೀಕರಣಕ್ಕೆ ಒತ್ತಾಯಿಸುವಂತಿಲ್ಲವಾದ್ದರಿಂದ ಪರ್ಯಾಯ ವ್ಯವಸ್ಥೆಯ ಕುರಿತು ಚಿಂತನೆ ನಡಸಿವೆ. ಅಲ್ಲದೆ ಸೇವೆಗಳ ನೀಡಲು ಆಧಾರ್ ಕಡ್ಡಾಯ ಮಾಡುವಂತೆ ಸರಕಾರವನ್ನು ಒತ್ತಾಯಿಸುತ್ತಿವೆ.

ಪೇಮೆಂಟ್ಸ್‌ ಕೌನ್ಸಿಲ್ ಆಫ್ ಇಂಡಿಯಾ ಶುಕ್ರವಾರ ಸದಸ್ಯರ ಸಭೆ ಕರೆದಿದ್ದು, ಆಧಾರ್ ಬಳಕೆಗೆ ಒತ್ತಾಯಿಸಿ ಕೇಂದ್ರವನ್ನು ಒತ್ತಾಯಿಸಲಿವೆ. ಜತೆಗೆ ಆಧಾರ್ ಬಳಕೆಯ ಪ್ರಯೋಜನಗಳು ಮತ್ತು ರದ್ದತಿಯಿಂದಾಗುವ ಸಮಸ್ಯೆಗಳ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿವೆ.

ಬೆಂಗಳೂರಿನಲ್ಲಿ ವಿವಿಧ ಆಪ್ ಮತ್ತು ಪಾವತಿ, ಬುಕಿಂಗ್, ಆರ್ಡರ್ ಸೇವೆಗಳಿಗೆ ಆಧಾರ್ ಗುರುತಿನ ದೃಢೀಕರಣ ಬಳಸುತ್ತಿದ್ದ ಕಂಪನಿಗಳು, ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಪೇಚಿಗೆ ಸಿಲುಕಿವೆ. ಸುಲಭದಲ್ಲಿ ಆಧಾರ್ ಮೂಲಕ ಗ್ರಾಹಕರ ಗುರುತನ್ನು ದೃಢೀಕರಿಸಿ ಸೇವೆ ನೀಡುತ್ತಿದ್ದ ಕಂಪನಿಗಳಿಗೆ, ಹೊಸ ನಿಯಮ ತಲೆನೋವು ತಂದೊಡ್ಡಿದೆ. ಗ್ರಾಹಕರ ದೃಢೀಕರಣ ಒಂದೆಡೆ ಸಮಸ್ಯೆಯಾಗಿದ್ದರೆ, ಮತ್ತೊಂದೆಡೆ ಹೆಚ್ಚುವರಿ ವೆಚ್ಚ ಮಾಡಿ ಗುರುತು ದೃಢೀಕರಿಸುವುದು ಇಲ್ಲವೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

Comments are closed.