ಕರ್ನಾಟಕ

ಝೀರೋ ಟ್ರಾಫಿಕ್‌ ಪ್ರಶ್ನಿಸಿದ್ದಕ್ಕೆ ನಿಮಗ್ಯಾಕೆ ಹೊಟ್ಟೆ ಉರಿ? ಎಂದ ಪರಮೇಶ್ವರ್

Pinterest LinkedIn Tumblr


ಬೆಂಗಳೂರು: ಝೀರೋ ಟ್ರಾಫಿಕ್‌ ವ್ಯವಸ್ಥೆ ಕುರಿತು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಉಪಮುಖ್ಯಮಂತ್ರಿ ,ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಗರಂ ಆದ ಘಟನೆ ಬುಧವಾರ ನಡೆದಿದೆ.

ಪರಮೇಶ್ವರ್‌ ಅವರ ಸಂಚಾರಕ್ಕೆ ಪೊಲೀಸರು ಝೀರೋ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಿಕೊಡುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತದೆ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸಿದರು.

ಅದು ಗೃಹ ಸಚಿವರು, ಉಪಮುಖ್ಯಮಂತ್ರಿಗಳಿಗೆ ಕೊಡತಕ್ಕಂತಹ ಗೌರವ. ನಾನಾಗಲಿ,ಇನ್ಯಾರಿರಲಿ ಅದನ್ನು ಕೊಡುತ್ತಾರೆ. ಹಿಂದಿನ ಗೃಹ ಸಚಿವರು ಬೇಡ ಅಂದರೆ ನಾನ್ಯಾಕೆ ಬೇಡ ಅನ್ನಲಿ ಎಂದು ಕಿಡಿ ಕಾರಿದರು.

ನಾನು ಝೀರೋ ಟ್ರಾಫಿಕ್‌ ವ್ಯವಸ್ಥೆ ಪಡೆದುಕೊಂಡರೆ ನಿಮಗೇನು ಹೊಟ್ಟೆ ಉರಿಯಾ ಎಂದು ಪ್ರಶ್ನಿಸಿದರು.

Comments are closed.