ಕರ್ನಾಟಕ

ತನ್ನ ಕಾರಿಗೆ 2.75 ಲಕ್ಷ ನೀಡಿ ಫ್ಯಾನ್ಸಿ ನಂಬರ್‌ ಖರೀದಿಸಿದ ನಲಪಾಡ್

Pinterest LinkedIn Tumblr


ಬೆಂಗಳೂರು: ನಗರದ ಶಾಂತಿನಗರದಲ್ಲಿ ನಡೆದ ಫ್ಯಾನ್ಸಿ ನಂಬರ್‌ಗಳ ಹರಾಜಿನಲ್ಲಿ ಭಾಗಿಯಾಗಿದ್ದ ಎಂಎಲ್‌ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ 2.75 ಲಕ್ಷ ರೂ. ನೀಡಿ KA-03 / NE -8055 ನಂಬರ್ ಅನ್ನು ಖರೀದಿಸಿದ್ದಾರೆ. ಹರಾಜಿನಲ್ಲಿ ಈ ನಂಬರ್‌ಗೆ 2 ಲಕ್ಷ ರೂ. ನೀಡಲಾಗಿದ್ದು, ಭದ್ರತಾ ಠೇವಣಿಗಾಗಿ 75 ಸಾವಿರ ರೂ. ನೀಡಲಾಗಿದೆ.

8055 – BOSS ನಂತೆ ಕಾಣುತ್ತದೆ. ಹೀಗಾಗಿ, ಈ ನಂಬರ್ ಅನ್ನು ನಲಪಾಡ್ ಖರೀದಿಸಿದ್ದಾನೆ. ಇನ್ನು, ಟಿವಿ ಕ್ಯಾಮೆರಾಗಳನ್ನು ನೋಡುತ್ತಿದ್ದಂತೆ ನಲಪಾಡ್ ಹ್ಯಾರಿಸ್ ಬೇಗ ಜಾಗ ಖಾಲಿ ಮಾಡಿದ್ದಾರೆ. ಫೆಬ್ರವರಿ 17ರಂದು ಉದ್ಯಮಿಯೊಬ್ಬರ ಪುತ್ರನ ಮೇಲೆ ಹಲ್ಲೆ ಮಾಡಿದ್ದ ನಲಪಾಡ್‌, 117 ದಿನಗಳ ಕಾಲ ಜೈಲಿನಲ್ಲಿದ್ದು ಹೊರ ಬಂದಿದ್ದರು.

ಇನ್ನು, ಸಾರಿಗೆ ಇಲಾಖೆಯು ಬೆಂಗಳೂರು ಪೂರ್ವ ಕಚೇರಿಯಲ್ಲಿ ಆರಂಭವಾಗಿರುವ ಕೆಎ 03, ಎನ್‌ಇ ಮುಂಗಡ ಶ್ರೇಣಿಯ ಫ್ಯಾನ್ಸಿ ನಂಬರ್‌ಗಳನ್ನು ಮಂಗಳವಾರ ಹರಾಜು ಹಾಕಿತು. ಒಟ್ಟು 23 ನೋಂದಣಿ ಸಂಖ್ಯೆಗಳ ಹರಾಜಿನಿಂದ 22.46 ಲಕ್ಷ ರೂ. ಆದಾಯ ಸಂಗ್ರಹವಾಯಿತು.

ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಆಕರ್ಷಕ ನೋಂದಣಿ ಸಂಖ್ಯೆಗಳನ್ನು ಬಹಿರಂಗವಾಗಿ ಹರಾಜು ಹಾಕಲಾಯಿತು. ಕೆಎ 03, ಎನ್‌ಇ 8055 ಸಂಖ್ಯೆಯು 2 ಲಕ್ಷ ರೂ. ಗಳಿಗೆ ಮಾರಾಟವಾಯಿತು. ಕಾರಿನ ಮಾಲೀಕರೊಬ್ಬರು ಕೆಎ 03, ಎನ್‌ಇ 0001 ಸಂಖ್ಯೆಯನ್ನು 1.05 ಲಕ್ಷ ರೂ.ಗೆ ಖರೀದಿಸಿದರು. ಒಟ್ಟು 23 ಫ್ಯಾನ್ಸಿ ನಂಬರ್‌ಗಳ ಹರಾಜಿನಿಂದ 5.21 ಲಕ್ಷ ರೂ., ಮೂಲ ಬಿಡ್‌ ಮೊತ್ತ 75 ಸಾವಿರ ರೂ. ನಂತೆ ಒಟ್ಟು 17.25 ಲಕ್ಷ ರೂ. ಸಂಗ್ರಹವಾಯಿತು.

Comments are closed.